ಕೇಜೊಗೆ ಕರೀನಾ ವರಿಸುವಾಸೆ ಇತ್ತು!

‘ನನಗೆ ಅವಕಾಶ ಸಿಕ್ಕಿದ್ದಿದ್ದರೆ ಕರೀನಾ ಕಪೂರ್ಳನ್ನು ಮದುವೆಯಾಗುತ್ತಿದ್ದೆ’ ಎಂದು, ಬಚ್ಚಿಟ್ಟಿದ್ದ ಗುಟ್ಟೊಂದನ್ನು ಕರಣ್ ಜೋಹರ್ ಯಾನೆ ಕೇಜೊ ಬಿಚ್ಚಿಟ್ಟಿದ್ದಾರೆ.
ಖಾಸಗಿ ಬದುಕಿನ ಬಗ್ಗೆ ಅಳುಕಿಲ್ಲದೆ ಮಾತನಾಡುವ ಕೇಜೊ ಇತ್ತೀಚಿಗೆ ಶೋವೊಂದರಲ್ಲಿ ತಮ್ಮ ಮನದ ಮಾತನ್ನು ಹಂಚಿಕೊಂಡರು. ‘ಬಾಲಿವುಡ್ನ ನಟಿಯರಲ್ಲಿ ಯಾರನ್ನಾದರೂ ವಿವಾಹವಾಗುವ ಅವಕಾಶ ಸಿಕ್ಕಿದ್ದಿದ್ದರೆ ಯಾರನ್ನು ಆರಿಸುತ್ತಿದ್ದಿರಿ?’ ಎಂದು ಕೇಳಿದಾಗ ತಡಮಾಡದೆ ‘ಕರೀನಾ ಕಪೂರ್’ ಎಂದು ಉತ್ತರಿಸಿದರು.
ಸೈಫ್ ಅಲಿ ಖಾನ್ ಜೊತೆಗೆ ಕರೀನಾ ಡೇಟಿಂಗ್ ಮಾಡುತ್ತಿದ್ದಾಗಲೂ, ಅವರಿಬ್ಬರ ವಿವಾಹ ಗೊತ್ತಾದಾಗಲೂ ಕೇಜೊ ಮತ್ತು ಕರೀನಾ ನಡುವಿನ ಆತ್ಮೀಯತೆ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಆಗಿನ್ನೂ ಕೇಜೊ ತಮ್ಮ ಲಿಂಗತ್ವದ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಹಾಗಾಗಿ ಕರೀನಾ ಮತ್ತು ಕೇಜೊ ನಡುವಿನ ಸಲುಗೆ, ಓಡಾಟ ಬಾಲಿವುಡ್ನಲ್ಲಿ ಹಲವರ ಹುಬ್ಬೇರುವಂತೆ ಮಾಡಿತ್ತು. ಪ್ರತಿ ವರ್ಷ ಇವರಿಬ್ಬರೂ ಸ್ನೇಹಿತರ ದಿನದಂದು ಬ್ಯಾಂಡ್ ಕಟ್ಟಿ ಉಡುಗೊರೆ ಕೊಟ್ಟುಕೊಳ್ಳುವುದು, ಪರಸ್ಪರರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡುವುದು ನಡೆದೇ ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.