ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್ ಕಾರ್ಯದಲ್ಲಿ ‘ಕರ್ಷಣಂ’

ಚಿತ್ರೀಕರಣ ಮುಕ್ತಾಯ
Last Updated 27 ಜೂನ್ 2018, 8:28 IST
ಅಕ್ಷರ ಗಾತ್ರ

ಬೆಂಗಳೂರು: ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಧನಂಜಯ ಅತ್ರೆ ನಾಯಕನಾಗಿರುವ ‘ಕರ್ಷಣಂ’ ಚಿತ್ರದ ಚಿತ್ರೀಕರಣ ಮುಗಿದಿದೆ. ಐವತೈದು ದಿನಗಳ ಕಾಲ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಶರವಣ ಈ ಚಿತ್ರದ ನಿರ್ದೇಶಕರು.

ಹೆಚ್ಚಾಗಿ ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ. ಆದರೆ ಜನರಿಗೆ ಅಷ್ಟಾಗಿ ಪರಿಚಯವಿಲ್ಲದ ಪ್ರದೇಶಗಳನ್ನೇ ನಿರ್ದೇಶಕ ಶರವಣ ಆಯ್ದುಕೊಂಡಿದ್ದಾರೆ. ನಾಯಕ ಧನಂಜಯ ಅತ್ರೆ ಅವರೇ ಈ ಚಿತ್ರಕ್ಕೆ ಹಣವನ್ನೂ ಹೂಡಿದ್ದಾರೆ. ಸದ್ಯ ‘ಕರ್ಷಣಂ’ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

ಬೆಂಗಳೂರಿನ ನಾಯಂಡಹಳ್ಳಿ ಬಳಿ ಇರುವ ಪಂತರಪಾಳ್ಯ ಕೊಳೆಗೇರಿಯಲ್ಲಿ ನಾಯಕನ ಇಂಟ್ರಡಕ್ಷನ್ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿಯೇ ಚಿತ್ರ ಮುಖ್ಯ ಭಾಗಗಳ ಚಿತ್ರೀಕರಣ ನಡೆಸಲಾಗಿದೆ. ಇನ್ನೊಂದು ಹಾಡನ್ನುಅಪಾರ್ಟ್‍ಮೆಂಟ್‌ ಒಂದರಲ್ಲಿ ನಡೆಸಲಾಗಿದೆ. ಕಥೆಯನ್ನು ಹಾಡಿನ ಮೂಲಕವೇ ಹೇಳುವಂಥ ಪ್ರಯತ್ನ ಕೂಡಾ ಈ ಚಿತ್ರದಲ್ಲಿ ನಡೆದಿದೆ.

ಇದುವರೆಗೆ ಗಾಯಕನಾಗಿ ಪ್ರಸಿದ್ಧಿ ಪಡೆದಿದ್ದ ಹೇಮಂತ್ ಈ ಮೂಲಕ ಸಂಗೀತ ನಿರ್ದೇಶಕನಾಗಿದ್ದಾರೆ. ಈ ಚಿತ್ರದಲ್ಲಿನ ನಾಲ್ಕು ಹಾಡುಗಳನ್ನು ಅಶ್ವಿನಿ ಆಡಿಯೊ ಮೂಲಕ ಬಿಡುಗಡೆ ಮಾಡಲಾಗಿದೆ.ಮೋಹನ್ ಎಂ. ಮುಗುಡೇಶ್ವರ ಛಾಯಾಗ್ರಹಣ, ಹೇಮಂತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅನೂಷಾ ರೈ, ಶ್ರೀನಿವಾಸ ಮೂರ್ತಿ, ಮನಮೋಹನ್ ರೈ, ವಿಜಯ ಚೆಂಡೂರು, ಗೌತಮ್ ರಾಜ್, ಯಮುನಾ ಶ್ರೀನಿಧಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT