‘ಸಖಿ’ಯಾಗಿ ಕೀರ್ತಿ

ಮಂಗಳವಾರ, ಜೂನ್ 18, 2019
28 °C

‘ಸಖಿ’ಯಾಗಿ ಕೀರ್ತಿ

Published:
Updated:
Prajavani

‘ಮಹಾನಟಿ’ ಸಿನಿಮಾದ ಯಶಸ್ಸಿನ ನಂತರ ದಕ್ಷಿಣ ಭಾರತೀಯ ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಶೀಘ್ರದಲ್ಲೇ ‘ಸಖಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಾನವ ಕಳ್ಳಸಾಗಾಣಿಕೆಯ ಕಥಾ ಹಂದರ ಹೊಂದಿರುವ ‘ಸಖಿ’ಯಲ್ಲಿ ಕೀರ್ತಿಯದ್ದು ಪ್ರಧಾನ ಪಾತ್ರ. ನರೇಂದ್ರನಾಥ್ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಕೀರ್ತಿ ಧೈರ್ಯವಂತ ಹೆಣ್ಣುಮಗಳ ಪಾತ್ರ ಮಾಡುತ್ತಿರುವುದು ವಿಶೇಷ. ವೇಶ್ಯಾವಾಟಿಕೆಯ ಕೂಪದಲ್ಲಿ ಬಿದ್ದಿರುವ ಮಹಿಳೆಯರನ್ನು ಸಂರಕ್ಷಣೆ ಮಾಡುವ ಪಾತ್ರದಲ್ಲಿ ಕೀರ್ತಿ ಸುರೇಶ್ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಕೀರ್ತಿ ಅಭಿಮಾನಿಗಳಲ್ಲಿ ಲೆಕ್ಕಾಚಾರ ಶುರುವಾಗಿದೆ. 

ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾದ ಮಾನವ ಕಳ್ಳಸಾಗಾಣಿಕೆ ಕುರಿತ ನೈಜ ಘಟನೆಯನ್ನಾಧರಿಸಿದ ಸಿನಿಮಾ ಇದಾಗಿದೆ ಎನ್ನುತ್ತಾರೆ ನಿರ್ದೇಶಕ ನರೇಂದ್ರನಾಥ್. ಸಿನಿಮಾಕ್ಕೆ ತಕ್ಕಂತೆ ಅಲ್ಲಲ್ಲಿ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಚಿತ್ರದಲ್ಲಿ ನರೇಶ್, ನಾಡಿಯಾ, ರಾಜೇಂದ್ರ ಪ್ರಸಾದ್, ಭಾನು ಶ್ರೀಮೆಹ್ತಾ ಪಾತ್ರವರ್ಗದಲ್ಲಿದ್ದಾರೆ. 

ಫೆಬ್ರುವರಿಯಲ್ಲಿ ‘ಸಖಿ’ ಚಿತ್ರೀಕರಣ ಆರಂಭವಾಗಿದ್ದು, ಹೈದರಾಬಾದ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯಕ್ಕೆ ಕೇರಳದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಶೀಘ್ರದಲ್ಲೇ ಯುರೋಪ್‌ಗೆ ತೆರಳಲಿದೆ. ಚಿತ್ರವನ್ನು ಈಸ್ಟ್‌ ಕೋಸ್ಟ್‌ ಪ್ರೊಡಕ್ಷನ್‌ನ ಮಹೇಶ್ ಕೊನೆರು ನಿರ್ಮಿಸುತ್ತಿದ್ದು, ‘ಮಹಾನಟಿ’ಯಲ್ಲಿ ಕ್ಯಾಮೆರಾ ಕೆಲಸ ಮಾಡಿದ್ದ ಡ್ಯಾನಿ ಸ್ಯಾನ್ಚೆಲೋಪೆಜ್‌ ಈ ಚಿತ್ರಕ್ಕೂ ಕ್ಯಾಮೆರಾ ಹಿಡಿದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !