ಬುಧವಾರ, ಸೆಪ್ಟೆಂಬರ್ 18, 2019
23 °C

ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಂತ್ರಸ್ತರಿಗೆ ₹ 25 ಲಕ್ಷ ನೆರವು

Published:
Updated:
Prajavani

ರಾಜ್ಯದ ವಿವಿಧೆಡೆ ನೆರೆ ಹಾವಳಿಗೆ ಸಿಲುಕಿ ಸಂಕಷ್ಟಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ನೆರವು ಕಲ್ಪಿಸಲು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ₹ 25 ಲಕ್ಷ ದೇಣಿಗೆ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು ಎಂದು ಅಧ್ಯಕ್ಷ ಜೈರಾಜ್‌ ತಿಳಿಸಿದ್ದಾರೆ.

ಇದೇ ವೇಳೆ 2018ನೇ ಸಾಲಿನ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದ ‘ನಾತಿಚರಾಮಿ’ ಚಿತ್ರದ ನಿರ್ದೇಶಕ ಮಂಸೋರೆ, ‘ಒಂದಲ್ಲಾ ಎರಡಲ್ಲಾ’ ಸಿನಿಮಾದ ನಿರ್ದೇಶಕ ಸತ್ಯಪ್ರಕಾಶ್, ನಿರ್ಮಾಪಕ ಉಮಾಪತಿ, ಬಾಲಕಲಾವಿದ ಪಿ.ವಿ. ರೋಹಿತ್, ನಟ ಮತ್ತು ನಿರ್ದೇಶಕ ರಿಷಬ್‍ ಶೆಟ್ಟಿ, ಕೆ.ಜಿ.ಎಫ್. ಚಿತ್ರದ ನಿರ್ಮಾಪಕರ ಪರವಾಗಿ ಚಿದಾನಂದ, ಸಾಹಸ ನಿರ್ದೇಶಕರಾದ ಅನ್ಬು ಅರಿವ್‌ ಅವರನ್ನು ಸನ್ಮಾನಿಸಲಾಯಿತು. ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಎಸ್.ಎ. ಚಿನ್ನೆಗೌಡ ಮತ್ತು ಪದಾಧಿಕಾರಿಗಳು ಹಾಜರಿದ್ದರು.

Post Comments (+)