ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಲಾಪೆಟ್ಟಿಗೆ ದೋಚಿದ ರಾಕಿ ಬಾಯ್, ಮೊದಲ ದಿನ ₹ 10 ಕೋಟಿ ಗಳಿಕೆ

ಕೆಜಿಎಫ್‌
Last Updated 21 ಡಿಸೆಂಬರ್ 2018, 14:10 IST
ಅಕ್ಷರ ಗಾತ್ರ

ಬೆಂಗಳೂರು:ನಟ ಯಶ್‌ ನಟನೆಯ ಕೆಜಿಎಫ್‌ ಚಿತ್ರ ಮೊದಲ ದಿನವೇ ರಾಜ್ಯದಲ್ಲಿ ₹ 10 ಕೋಟಿ ಗಳಿಕೆಯ ಮೂಲಕ ಗಲ್ಲಾಪೆಟ್ಟಿಗೆಯನ್ನು ದೋಚಿದೆ.

‘ಹಿಂದಿ, ತೆಲುಗು, ತಮಿಳು, ಮಲಯಾಳ ಭಾಷೆಯಲ್ಲೂ ಚಿತ್ರ ತೆರೆಕಂಡಿದ್ದು, ಈ ಅವತರಣಿಕೆಯಲ್ಲಿನ ಗಳಿಕೆ ಬಗ್ಗೆ ಇನ್ನೂ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ’ ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ತಿಳಿಸಿದ್ದಾರೆ.

ಚಿತ್ರದ ಹಿಂದಿ ಅವತರಣಿಕೆಯು 1,200 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಕರ್ನಾಟಕದಲ್ಲಿ 350, ಆಂಧ್ರ ಮತ್ತು ತೆಲಂಗಾಣದಲ್ಲಿ 350, ಕೇರಳದಲ್ಲಿ 55 ಚಿತ್ರಮಂದಿರಗಳಲ್ಲಿ ಹವಾ ಎಬ್ಬಿಸಿದೆ. ಇದೇ ದಿನ ತಮಿಳಿನ ಏಳು ಚಿತ್ರಗಳು ಬಿಡುಗಡೆಯಾಗಿರುವ ಪರಿಣಾಮ ತಮಿಳುನಾಡಿನಲ್ಲಿ ಈ ಚಿತ್ರಕ್ಕೆ ನಿರೀಕ್ಷಿಸಿದಷ್ಟು ಚಿತ್ರಮಂದಿರಗಳು ಸಿಕ್ಕಿಲ್ಲ. 100 ಥಿಯೇಟರ್‌ಗಳಲ್ಲಿ ತೆರೆಕಂಡಿದೆ. ಉಳಿದಂತೆ ಅಮೆರಿಕ, ಕೆನಡಾ, ಇಂಗ್ಲೆಂಡ್‌ನಲ್ಲೂ ರಾಕಿ ಬಾಯ್ ಅಬ್ಬರ ಜೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT