2023ರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಸದ್ಯ ಬಿಡುಗಡೆಗೆ ಭರ್ಜರಿಯಾಗಿ ಸಜ್ಜಾಗುತ್ತಿದೆ. ಟೀಸರ್ ಬಳಿಕ ಚಿತ್ರದ ಮೊದಲ ಲಿರಿಕಲ್ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 17ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಮೊದಲ ಹಾಡು ಫೆ.4ರಂದು ಹೊರಬರಲಿದೆ.

ಸಿನಿಮಾ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್.ಚಂದ್ರು, ‘ಒಂಬತ್ತು ಭಾಷೆಗಳಲ್ಲಿ ‘ಕಬ್ಜ’ ತೆರೆಕಾಣಲಿದೆ. ನಿರ್ದೇಶಕನಾಗಿ ಜೊತೆಗೆ ನಿರ್ಮಾಪಕನಾಗಿಯೂ ಖುಷಿಯಾಗಿದ್ದೇನೆ. ಈಗಾಗಲೇ ಸಿನಿಮಾವನ್ನು ಅಮೆಜಾನ್ ಪ್ರೈಂ ಒಟಿಟಿ ವೇದಿಕೆಗೆ ಮಾರಾಟ ಮಾಡಿದ್ದೇನೆ. ಉಳಿದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸಿಕ್ಕಿದಂಥ ದೊಡ್ಡ ಮೊತ್ತವೇ ‘ಕಬ್ಜ’ ಸಿನಿಮಾಗೂ ಸಿಕ್ಕಿದೆ. ಕನ್ನಡದಲ್ಲಿ ಸಿನಿಮಾ ವಿತರಣೆಯ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಹಿಂದಿ, ತೆಲುಗು, ಮಲಯಾಳಂನಲ್ಲಿ ವಿತರಣೆ ಹಕ್ಕುಗಳು ಮಾರಾಟವಾಗಿದೆ. ಉತ್ತರ ಅಮೆರಿಕ, ಜಪಾನ್, ಶ್ರೀಲಂಕಾ, ಮಲೇಷಿಯಾ, ಯುಎಇನಲ್ಲೂ ‘ಕಬ್ಜ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಿಗೂ ದೊಡ್ಡ ಮೊತ್ತಕ್ಕೆ ಸಿನಿಮಾ ಮಾರಾಟವಾಗಿದೆ’ ಎಂದರು.

ಮಾರ್ಚ್ 17ರಂದೇ ಸಿನಿಮಾ ಬಿಡುಗಡೆ ಏಕೆ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿ, ‘ಪುನೀತ್ ಅವರು ನಮ್ಮ ಸೆಟ್‌ಗೆ ಹಲವು ಬಾರಿ ಭೇಟಿ ನೀಡಿದ್ದರು. ‘ಇಷ್ಟೊಂದು ಖರ್ಚು ಮಾಡುತ್ತಿದ್ದೀಯಾ’ ಎಂದು ಕೇಳುತ್ತಿದ್ದರು. ಮೋಷನ್ ಪೋಸ್ಟರ್ ನೋಡಿ ‘ಸಖತ್ತಾಗಿದೆ’ ಎಂದಿದ್ದರು. ‘ಪ್ರಚಾರಕ್ಕೆ ಬೆಂಬಲವಾಗಿರುತ್ತೇನೆ. ಟೀಸರ್ ನಾನೇ ಬಿಡುಗಡೆ ಮಾಡಬೇಕು’ ಎಂದು ಫೋನ್‌ನಲ್ಲಿ ಹೇಳಿದ್ದರು. ಈ ಸಿನಿಮಾ ಅಪ್ಪುಗೇ ಅರ್ಪಣೆ’ ಎಂದು ನೆನಪಿಸಿಕೊಂಡರು ಚಂದ್ರು.

‘ನಮ್ಮ ಕನ್ನಡದ ನೆಲದಿಂದ ಬಂದ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾವೊಂದು ಹೆದ್ದಾರಿ ಮಾಡಿಕೊಟ್ಟಿದೆ. ಈ ಹೆದ್ದಾರಿಯನ್ನು ನಾವು ಬಳಸಿಕೊಳ್ಳದೇ ಹೋದರೆ ದೊಡ್ಡ ತಪ್ಪು. ನನಗೆ ಪ್ರೇರಣೆಯೇ ‘ಕೆ.ಜಿ.ಎಫ್’. ಹಾಗೆಂದು ‘ಕಬ್ಜ’ ಸಿನಿಮಾ ‘ಕೆ.ಜಿ.ಎಫ್’ ಅಲ್ಲ. ಆ ಸಿನಿಮಾ ರೀತಿಯೇ ‘ಕಬ್ಜ’ ಮಾಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.