ಮಂಗಳವಾರ, ಸೆಪ್ಟೆಂಬರ್ 21, 2021
21 °C

ನಟಿ ಖುಷ್ಬೂ ಸುಂದರ್‌ ಅಧಿಕೃತ ಟ್ವಿಟರ್‌ ಖಾತೆ ಹ್ಯಾಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚೆನ್ನೈ: ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್‌ ಅವರ ಅಧಿಕೃತ ಟ್ವಿಟರ್‌ ಖಾತೆಯನ್ನು ಸೋಮವಾರ ಹ್ಯಾಕ್‌ ಮಾಡಲಾಗಿದೆ.

ಖುಷ್ಬೂ ಅವರ ಟ್ವಿಟರ್‌ ಖಾತೆ ಹ್ಯಾಕ್‌ ಆಗಿರುವುದು ಇದು ಎರಡನೇ ಸಲ. 2020ರ ಏಪ್ರಿಲ್‌ನಲ್ಲಿ ಖುಷ್ಬೂ ಅವರ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು.

ಈ ಬಾರಿ ಟ್ವಿಟರ್‌ ಖಾತೆಯ ಹೆಸರನ್ನು ಬ್ರಯಾನ್‌ ಎಂದು ಬದಲಿಸಿದ್ದಾರೆ. ಹಾಗೇ ಕವರ್‌ ಚಿತ್ರವನ್ನು ಬದಲಾಯಿಸಿದ್ದು, ಅವರ ಎಲ್ಲಾ ಟ್ವೀಟ್‌ಗಳನ್ನು ಅಳಿಸಲಾಗಿದೆ.

ಈ ಬಗ್ಗೆ ಖುಷ್ಬೂ ದೂರು ದಾಖಲು ಮಾಡಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಖುಷ್ಬೂ ಅವರ ಟ್ವಿಟರ್‌ ಖಾತೆಯನ್ನು ಮರು ಸ್ಥಾಪಿಸಲಾಗುವುದು ಎಂದು ಟ್ವಿಟರ್‌ ತಿಳಿಸಿದೆ ಎಂದು ಖುಷ್ಬೂ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು