ಹಾಲಿವುಡ್‌ನ ‘ದಿ ಗರ್ಲ್ ಆನ್ ದಿ ಟ್ರೈನ್’ ಹಿಂದಿಯಲ್ಲೂ ಬರುತ್ತಿದೆ.ರಿಭು ದಾಸ್ ಗುಪ್ತಾ ನಿರ್ದೇಶನದ ಹಿಂದಿ ರಿಮೇಕ್‌ನಲ್ಲಿಪರಿಣಿತಿ ಚೋಪ್ರಾ ಹಾಗೂ ಆದಿತಿ ರಾವ್ ಹೈದರಿ ನಾಯಕಿಯರಾಗಿ ಮತ್ತು ನಟಿ ಕೀರ್ತಿ ಕುಲ್ಹಾರಿ ಅವರು ಆಲಿಯಾ ಶೆರ್ಗಿಲ್ ಎಂಬ ಬ್ರಿಟಿಷ್ ಪೊಲೀಸ್ ಅಧಿಕಾರಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಂಡನ್‌ನಲ್ಲಿ ಇದೇ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು, ತಿಂಗಳ ಕಾಲ ನಡೆಯಲಿದೆ. ಚಿತ್ರ 2020ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆಗಸ್ಟ್ 15ಕ್ಕೆ ಬಿಡುಗಡೆಯಾಗುತ್ತಿರುವ‘ಮಿಷನ್ ಮಂಗಲ’ ಚಿತ್ರದಲ್ಲಿ ಕೀರ್ತಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈಗಅವರ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ.

ರಿಭು ದಾಸ್ ಗುಪ್ತಾ ನಿರ್ದೇಶನದ ನೆಟ್‌ಫ್ಲಿಕ್ಸ್ ಸರಣಿ ‘ಬಾರ್ಡ್ ಆಫ್ ಬ್ಲಡ್’ನಲ್ಲಿ ಕೀರ್ತಿ ನಟಿಸಿದ್ದರು. ಚಿತ್ರೀಕರಣ ಸಮಯದಲ್ಲಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಆಗ ಈ ಸಿನಿಮಾದ ಚಿತ್ರಕತೆ ಓದುವಾಗಪೊಲೀಸ್ ಪಾತ್ರವು ಕೀರ್ತಿಗೆ ಆಸಕ್ತಿ ಕೆರಳಿಸಿತ್ತು. ಹಾಗಾಗಿ ಆ ಪಾತ್ರವನ್ನು ಅವರು ಒಪ್ಪಿಕೊಂಡರು.

‘ಪಿಂಕ್’ ನಂತರ ಇದು ನನ್ನ ನಾಲ್ಕನೇ ಚಿತ್ರ. ರಿಭು ದಾಸ್ ಗುಪ್ತಾ ಅವರ ಜೊತೆ ಎರಡನೇ ಬಾರಿ ಕೆಲಸ ಮಾಡುತ್ತಿದ್ದೇನೆ ಎಂದು ಕೀರ್ತಿ ಹೇಳಿದ್ದಾರೆ. ‘ಉರಿ– ದಿ ಸರ್ಜಿಕಲ್ ಸ್ರ್ಟೈಕ್‘ ಚಿತ್ರದಲ್ಲೂ ಕೀರ್ತಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.