ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ‘ಪ್ರಕರಣ ತನಿಖಾ ಹಂತದಲ್ಲಿದೆ!’: ಚಿತ್ರದ ಟ್ರೇಲರ್‌ ಬಿಡುಗಡೆ

Published : 22 ಸೆಪ್ಟೆಂಬರ್ 2024, 18:42 IST
Last Updated : 22 ಸೆಪ್ಟೆಂಬರ್ 2024, 18:42 IST
ಫಾಲೋ ಮಾಡಿ
Comments

ಒಂದು ಕೊಲೆಯ ಸುತ್ತ ನಡೆಯುವ ಕಥೆಯನ್ನು ಹೊಂದಿರುವ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಹುತೇಕ ರಂಗಭೂಮಿ ಕಲಾವಿದರೇ ಸೇರಿ ಸಿದ್ಧಗೊಳಿಸಿರುವ ಈ ಚಿತ್ರಕ್ಕೆ ಸುಂದರ್ ಎಸ್‌. ನಿರ್ದೇಶನವಿದೆ.

‘ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಕಂಡು ನಾವೆಲ್ಲ ಕಥೆ ಮಾಡಿಕೊಂಡಿದ್ದೆವು. ಎಲ್ಲ ಒಟ್ಟಾಗಿ ಕುಳಿತು ಚರ್ಚಿಸುವಾಗ ನನ್ನ ಕಥೆ ಆಯ್ಕೆಯಾಯಿತು. ಕೊಲೆಯ, ಅಪರಾಧ ಜಗತ್ತಿನ ಕುತೂಹಲಕಾರಿ ಕಥೆ. ಚಿತ್ರೀಕರಣ ಮುಗಿದಿದ್ದು, ಅಕ್ಟೊಬರ್ 18ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಚಿಂತನ್ ಕಂಬಣ್ಣ ಬಂಡವಾಳ ಹೂಡಿದ್ದಾರೆ. ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಹೀನ್‌ ಕುಬೇರ್‌, ಮುತ್ತುರಾಜ್‌ ಟಿ, ಗಗನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರಕ್ಕೆ ಶಿವೋಂ ಸಂಗೀತ, ಮೋಹನ ಎಂ.ಎಸ್‌ ಮತ್ತು ಜಗದೀಶ್‌ ಛಾಯಾಚಿತ್ರಗ್ರಹಣ, ನಾನಿ ಕೃಷ್ಣ ಸಂಕಲನವಿದೆ. ಬೆಂಗಳೂರು ಮತ್ತು ಕನಕಪುರದ ಸುತ್ತಮುತ್ತ ಚಿತ್ರೀಕರಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT