ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಟಿಗೊಬ್ಬ 3’ ವಿಡಿಯೊ ಸಾಂಗ್: ಆಕಾಶಾನೇ ಅದರಿಸುವ ಭೂಮಿನೇ ಪಳಗಿಸುವ ಕಿಚ್ಚ ಸುದೀಪ

Last Updated 27 ಏಪ್ರಿಲ್ 2020, 6:40 IST
ಅಕ್ಷರ ಗಾತ್ರ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಮೊದಲ ವಿಡಿಯೊ ಸಾಂಗ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸೌಂಡು ಮಾಡುತ್ತಿದೆ.

ಈ ಹಿಂದೆ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿತ್ತು. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಟೀಸರ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿತ್ತು.

ಇದೀಗ ಸಾಹಿತ್ಯಿಕ‌‌ ಹಾಡು ಬಿಡುಗಡೆಯಾಗಿದೆ. ಕೇವಲ1 ಗಂಟೆಯಲ್ಲಿ 4.75 ಲಕ್ಷ ವೀಕ್ಷಣೆ ಪಡೆದಿರುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸದಾಖಲೆಯಾಗಿದೆ.

‘ಆಕಾಶಾನೇ ಅದರಿಸುವ ಈ ಭೂಮಿನ ಪಳಗಿಸುವ, ಕೋಟಿ, ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ, ನಾಲ್ಕು ತಲೆ ಬ್ರಹ್ಮನಿಗೂ ಕನ್‌ಫ್ಯೂಸ್‌ ಮಾಡೊನಿವಾ...ಕೋಟಿಗೊಬ್ಬ...ಕೋಟಿಗೊಬ್ಬ’..!

ಲಾಕ್‌ಡೌನ್‌ ಹಿನ್ನೆಯಲ್ಲಿ ಮನೆಯಲ್ಲಿರುವ ಕಿಚ್ಚನ ಅಭಿಮಾನಿಗಳಿಗೆ ಈ ಹಾಡು ಸಖತ್ ಕಿಕ್ ಕೊಟ್ಟಿದೆ.

ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ಅವರು ಕಿಚ್ಚನಿಗೆ ನಾಯಕಿಯಾಗಿದ್ದಾರೆ. ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ ಮತ್ತು ಶ್ರದ್ಧಾ ದಾಸ್‌ ಕೂಡ ನಟಿಸಿರುವುದು ಈ ಚಿತ್ರದ ವಿಶೇಷ.

ಶಿವ ಕಾರ್ತಿಕ್‌ ನಿರ್ದೇಶನದ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರುವ ‘ಕೋಟಿಗೊಬ್ಬ 3‘ ಸಿನಿಮಾಗೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT