ಬುಧವಾರ, ಜನವರಿ 29, 2020
26 °C

ಕೋಟಿಗೊಬ್ಬ 3: ಟೈಟಲ್ ಟ್ರ್ಯಾಕ್‌ಗೆ ಕಿಚ್ಚನ ಕುಣಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವ ಕಾರ್ತಿಕ್‌ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರದ ಮಾತಿನ ಭಾಗದ ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ, ಹಾಡಿನ ಚಿತ್ರೀಕರಣದಲ್ಲಿ ತೊಡಗಿದೆ.

ಪ್ರಭುದೇವ ನಿರ್ದೇಶನದ ‘ದಬಾಂಗ್‌ 3’ ಚಿತ್ರದಲ್ಲಿ ನಟ ಸಲ್ಮಾನ್‌ಖಾನ್‌ ವಿರುದ್ಧ ಅಬ್ಬರಿಸಿದ್ದ ಸುದೀಪ್ ಈಗ ‘ಕೋಟಿ‌ಗೊಬ್ಬ 3’ ಚಿತ್ರದ ಟೈಟಲ್ ಟ್ರ್ಯಾಕ್‌ನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಹಾಡಿನ ಫೋಟೊಗಳನ್ನು ಸುದೀಪ್‌ ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ಅವರು ಕಿಚ್ಚನಿಗೆ ನಾಯಕಿಯಾಗಿದ್ದಾರೆ. ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ ಮತ್ತು ಶ್ರದ್ಧಾ ದಾಸ್‌ ಕೂಡ ನಟಿಸಿರುವುದು ಈ ಚಿತ್ರದ ವಿಶೇಷ. ಸೂರಪ್ಪಬಾಬು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಸಿನಿಮಾ ಬಳಿಕ ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಸಿನಿಮಾದಲ್ಲಿ ಸುದೀ‍ಪ್‌ ಅವರು ನಟಿಸಲಿದ್ದಾರೆ. ಜೊತೆಗೆ, ತಾನು ಶೀಘ್ರವೇ ಸ್ವಮೇಕ್‌ ಚಿತ್ರವೊಂದನ್ನು ನಿರ್ದೇಶಿಸಲಿದ್ದೇನೆ. ಈ ಸಂಬಂಧ ತಯಾರಿಯೂ ನಡೆಯುತ್ತಿದೆ ಎಂದು ಸುದೀಪ್ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು