‘ಕುಂಟ ಕೋಣ ಮೂಕ ಜಾಣ’

7

‘ಕುಂಟ ಕೋಣ ಮೂಕ ಜಾಣ’

Published:
Updated:

9 ಸ್ಟಾರ್ ಏಂಜಲ್ ಮೂವೀಸ್ ಲಾಂಛನದಡಿ ಈ. ಹೆಚ್. ಬಸವರಾಜ್ ನಿರ್ಮಿಸುತ್ತಿರುವ ‘ಕುಂಟ ಕೋಣ ಮೂಕ ಜಾಣ’ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಈಗ ಮುಗಿದಿದೆ. ದ್ವಿತೀಯ ಹಾಗೂ ಅಂತಿಮ ಹಂತದ ಚಿತ್ರೀಕರಣವು ಶಿಕಾರಿಪುರದ ಸುತ್ತಮುತ್ತ ಸಾಗಿದೆ.

ಉತ್ತರ ಕರ್ನಾಟಕದಲ್ಲಿ 15,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ಇದೇ ಹೆಸರಿನ ನಾಟಕವನ್ನು ಆಧರಿಸಿದ ಸಿನಿಮಾ ಇದು. ಚಿತ್ರಕ್ಕೆ ಬಸವರಾಜ್ ಸಾಹಿತ್ಯ ಬರೆದಿದ್ದಾರೆ. ರಾಜ್‍ಕಿಶೋರ್‌ರಾವ್‌ ಸಂಗೀತವಿದೆ. ಅರುಣ್ ಮಹಳತ್ಕರ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಸಂಭಾಷಣೆ ಹಾಗೂ ನಿರ್ದೇಶನ ರಾಜಣ್ಣ ಜೇವರ್ಗಿ ಮಾಡಿದ್ದಾರೆ.

ದಯಾನಂದ್ ಬೀಳಗಿ, ಹರೀಶ್ ಮಾರುತಿ, ಪ್ರಿಯಾ, ರಾಕ್‍ಲೈನ್ ಸುಧಾಕರ್, ಸತ್ಯಜಿತ್, ಸುಜಾತಾ, ಶ್ವೇತಾ ಬೀಳಗಿ, ಮೈಕಲ್ ಮಧು ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !