ಸದಾ ವಿಭಿನ್ನ ಪಾತ್ರಗಳ ಆಯ್ಕೆಯ ಮೂಲಕವೇ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿರುವ ನಟ ಅಕ್ಷಯ್ ಕುಮಾರ್ ತಮ್ಮ ಮುಂದಿನ ಚಿತ್ರ ಲಕ್ಷ್ಮಿ ಬಾಂಬ್ನ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದು ‘ಫಸ್ಟ್ ಡೇ ಫಸ್ಟ್ ಶೋವನ್ನು ಮನೆಯಲ್ಲೇ ಆರಾಮವಾಗಿ ಕುಳಿತು ನೋಡಿ. ಈ ಪಾತ್ರ ನನ್ನಲ್ಲಿ ನಗು ತರಿಸುವ ಜೊತೆಗೆ ಭಯವನ್ನು ಹುಟ್ಟು ಹಾಕಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಕೈ ತುಂಬಾ ಬಳೆ ತೊಟ್ಟು, ಹಣೆ ಮೇಲೆ ಅಗಲದ ಕುಂಕುಮದ ಬೊಟ್ಟು ಧರಿಸಿರುವ ಅಕ್ಷಯ್ ಅರ್ಧ ಮುಖವನ್ನಷ್ಟೇ ಪೋಸ್ಟರ್ನಲ್ಲಿ ತೋರಿಸಲಾಗಿದೆ. ಅಕ್ಷಯ್ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಚಿತ್ರದ 2 ಪೋಸ್ಟರ್ ಅನ್ನು ಅಕ್ಷಯ್ ಈಗ ಬಿಡುಗಡೆ ಮಾಡಿದ್ದಾರೆ. ಇದರ ಮೊದಲ ಲುಕ್ ಅನ್ನು ಕಳೆದ ವರ್ಷವೇ ಆನ್ಲೈನ್ ಬಿಡುಗಡೆ ಮಾಡಲಾಗಿತ್ತು. ಒಟಿಟಿಯಲ್ಲಿ ಬಿಡುಗಡೆಯಾಗುವ ಅಕ್ಷಯ್ ಕುಮಾರ್ ಮೊದಲ ಚಿತ್ರವಿದು. ಹಾರ್ರ್ ಚಿತ್ರಗಳಿಗೆ ಹೆಸರುವಾಸಿಯಾದ ರಾಘವ ಲಾರೆನ್ಸ್ ಈ ಚಿತ್ರದ ನಿರ್ದೇಶಕ.ಈ ಚಿತ್ರವು ತಮಿಳಿನ ಕಾಂಚನ ಸಿನಿಮಾದ ರಿಮೇಕ್.

ಮುಂದಿನ ಅಕ್ಟೋಬರ್ವರೆಗೆ ಬಾಲಿವುಡ್ನಲ್ಲಿ 6 ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿವೆ. ಅದರಲ್ಲಿ ಅಕ್ಷಯ್ ಅಭಿನಯದ ಲಕ್ಷ್ಮಿ ಬಾಂಬ್ ಕೂಡ ಒಂದು.

ಕಳೆದ ವರ್ಷ ಬಿಡುಗಡೆಯಾದ ಮೊದಲ ಲುಕ್ ಮೂಲಕವೇ ಅಪಾರ ನಿರೀಕ್ಷೆ ಹುಟ್ಟಿಸಿತ್ತು ಲಕ್ಷ್ಮಿ ಬಾಂಬ್. ಅಕ್ಷಯ್ ಕುಮಾರ್ ಅವರ ಈ ಭಿನ್ನ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಅರ್ಧಂಬರ್ಧ ಗೋಚರವಾಗುವ ನೋಟದಲ್ಲಿ ಅಕ್ಷಯ್ ಭೀಭತ್ಸ ನೋಟ ಭಯ ಹುಟ್ಟಿಸುವಂತಿದೆ. ಆ ಮೂಲಕ ನಿರ್ದೇಶಕರು ಕತೆಯ ಸಾರಾಂಶವನ್ನು ಗೌಪ್ಯವಾಗಿಟ್ಟಿದ್ದಾರೆ. ತೃತಿಯಲಿಂಗಿ ವ್ಯಕ್ತಿಯೊಬ್ಬನ ದೇಹದಲ್ಲಿ ಭೂತ ಅವಾಹನೆಯಾಗುವ ಕತೆ ಇದು.

ಮತ್ತೊಂದು ಪೋಸ್ಟರ್ ಜೊತೆ ‘ತಾಯಾಣೆಗೂ ನಾನು ಎಂದು ಬಳೆ ಧರಿಸಿದ್ದೇನೊ ಅಂದಿನಿಂದ ಇಲ್ಲಿಯವರೆಗೆ ಭೂತಗಳು ನನ್ನ ಬಳಿ ಬರಲು ಭಯ ಬೀಳುತ್ತಿವೆ’ ಎಂದು ಹಾಸ್ಯಾಸ್ಪದವಾಗಿ ಬರೆದುಕೊಂಡಿದ್ದಾರೆ ಅಕ್ಷಯ್.

ಈ ಸಿನಿಮಾ ಕುರಿತು ಅನ್ಲೈನ್ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕ್ಷಯ್ ಸಿನಿಮಾ ಹಾಗೂ ಪಾತ್ರದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ’ನಾನು ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಸೀರೆ ಧರಿಸಿ ತೃತಿಯಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಈ ಚಿತ್ರವು ಕಲಿಕೆಯ ಅನುಭವದೊಂದಿಗೆ ಲಿಂಗ ಸಮಾನತೆಯ ಬಗ್ಗೆ ಇನ್ನಷ್ಟು ವಿಸ್ತಾರವಾದ ಅರಿವು ನನ್ನಲ್ಲಿ ಮೂಡುವಂತೆ ಮಾಡಿದೆ. ಹತ್ತಿರತ್ತಿರ 150 ಸಿನಿಮಾಗಳಲ್ಲಿ ನಟಿಸಿದ್ದರೂ ಈ ಸಿನಿಮಾದ ಸೆಟ್ಗೆ ಹೋಗುವಾಗ ಪ್ರತಿದಿನ ಹೊಸತು ಎನ್ನಿಸುತ್ತಿತ್ತು. ಈ ಸಿನಿಮಾದಲ್ಲಿ ನನ್ನ ಜ್ಞಾನದ ಪರಿಧಿಯನ್ನು ದಾಟಿ ಹೊಸ ಹೊಸದನ್ನು ಕಲಿತಿದ್ದೇನೆ’ ಎಂದಿದ್ದಾರೆ

‘ಲಿಂಗ ಸಮಾನತೆಯ ಬಗ್ಗೆ ನಾನು ತಿಳಿದುಕೊಂಡಿದ್ದಕ್ಕಿಂತಲೂ ಹೆಚ್ಚು ಈ ಸಿನಿಮಾ ತಿಳಿಯುವಂತೆ ಮಾಡಿದೆ. ನಿಮಗೆ ಬೇಕೆನ್ನಿಸಿದ್ದನ್ನು ಮಾಡಿ, ಅಜ್ಞಾನಿಯಾಗಬೇಡಿ. ದಯೆ, ಕರುಣೆ ಎನ್ನುವುದೇ ಸಾರ್ವತ್ರಿಕ ಶಾಂತಿಯ ಕೀಲಿ ಕೈ. ಅದು ಯಾವಾಗಲೂ ಹೀಗೆ ಇರುತ್ತದೆ’ ಎಂದಿದ್ದಾರೆ.

ಲಕ್ಷ್ಮಿ ಬಾಂಬ್ನಲ್ಲಿ ಅಕ್ಷಯ್ ಜೊತೆ ಕಿಯಾರ ಅಡ್ವಾಣಿ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೊ ನಿರ್ಮಾಣ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.