ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ ಮಂಗೇಶ್ಕರ್‌ ಜೀವನದ ಪ್ರಮುಖ ಅಂಶಗಳು

Last Updated 6 ಫೆಬ್ರುವರಿ 2022, 14:14 IST
ಅಕ್ಷರ ಗಾತ್ರ

* ಲತಾ ಮಂಗೇಶ್ಕರ್‌ 1929ರ ಸೆಪ್ಟೆಂಬರ್‌ 28ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನನ

* ತಂದೆ ಹೆಸರಾಂತ ಮರಾಠಿ ನಟ ಹಾಗೂ ರಂಗಕರ್ಮಿ ದೀನನಾಥ ಮಂಗೇಶ್ಕರ್‌ ಮತ್ತು ತಾಯಿ ಸೇವಂತಿ

* ಜನ್ಮನಾಮ ಹೇಮಾ ಎಂದು ಇಡಲಾಗಿತ್ತು. ಬಳಿಕ ತಮ್ಮ ತಂದೆಯ ನಾಟಕ ಭಾವ ಬಂಧನದಲ್ಲಿನ ಲತಿಕಾ ಪಾತ್ರ ನಿರ್ವಹಣೆ ನಂತರ ಲತಾ ಎಂದು ನಾಮಕರಣವಾಯಿತು.

* ಐದನೇ ವಯಸ್ಸಿನಲ್ಲೇ ತಮ್ಮ ತಂದೆಯ ಸಂಗೀತ ನಾಟಕಗಳಲ್ಲಿ ನಟಿಯಾಗಿ ವೃತ್ತಿ ಪ್ರಾರಂಭ.

*ಮುಂಬೈನ ಭೆಂಡಿ ಬಜಾರ್ ಘರಾನಾದಲ್ಲಿ ಸಂಗೀತ ತರಬೇತಿ

* ಲತಾ ಅವರು 1942ರಲ್ಲಿ ಕಿತಿ ಹಸಾಲ್‌ ಎಂಬ ಮರಾಠಿ ಚಿತ್ರಕ್ಕೆ ತಮ್ಮ ಮೊದಲ ಗೀತೆ ಹಾಡಿದರು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.

* 1943ರಲ್ಲಿ ಬಿಡುಗಡೆಯಾದ ಮರಾಠಿ ಚಿತ್ರ ಗಜಾಭಾವುಗಾಗಿ ‘ಮಾತಾ ಏಕ್‌ ಸಪೂತಿ ಕಿ ದುನಿಯಾ ಬಾದಲ್‌ ದೇ ತು’ ಎಂಬತಮ್ಮ ಮೊದಲ ಹಿಂದಿ ಗೀತೆಯ ಧ್ವನಿ ಮುದ್ರಣ.

* ಲತಾ ಅವರ ಧ್ವನಿಯು ತುಂಬಾ ತೆಳುವಾಗಿದೆ ಎಂದು ಪ್ರಸಿದ್ಧ ನಿರ್ಮಾಪಕ ಶಶಾಧರ್‌ ಮುಖರ್ಜಿ ಅವರು ಲತಾ ಅವರ ಧ್ವನಿಯನ್ನು ನಿರಾಕರಿಸಿದ್ದರು.

* 1942–2015ರವರೆಗೂ ಸುದೀರ್ಘ 73 ವರ್ಷಗಳ ಕಾಲ ಹಾಡಿದ ಲತಾ ಮಂಗೇಶ್ಕರ್‌ ಅವರು ಹಿಂದಿ ಮತ್ತು ಇತರ ಭಾಷೆಗಳಲ್ಲಿ 28 ರಿಂದ 30 ಸಾವಿರ ಗೀತೆಗಳ ಗಾಯನ.

* 1999-2005ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT