ಮಂಗಳವಾರ, ಮೇ 17, 2022
27 °C

ವಿಜಯ ದೇವರಕೊಂಡ ನಟನೆಯ ಲೈಗರ್ ಬಿಡುಗಡೆ ದಿನಾಂಕ ನಾಳೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಲೈಗರ್’ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಸದ್ದು ಮಾಡಲು ಬರುತ್ತಿದ್ದಾರೆ ಡ್ಯಾನಿಂಗ್ ನಿರ್ದೇಶಕ ಪುರಿ ಜಗನ್ನಾಥ್‌. ಯೂತ್‌ಸ್ಟಾರ್ ವಿಜಯ್‌ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿಗೆ ಸೇರಿದೆ. ಕರಣ್‌ ಜೋಹರ್‌ ಪ್ರಸ್ತುತ ಪಡಿಸುತ್ತಿರುವ ಈ ಆ್ಯಕ್ಷನ್ ಹಿನ್ನೆಲೆಯುಳ್ಳ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ ಚಾರ್ಮಿ ಕೌರ್‌.

ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ನಾಳೆ ತಿಳಿಸಲಿದೆ ಚಿತ್ರತಂಡ. ಈ ವಿಷಯವನ್ನು ತಿಳಿಸಲು ಚಾರ್ಮಿ ಹಾಗೂ ಅನನ್ಯಾ ಕಡೆಯಿಂದ ವಿಶೇಷ ವಿಡಿಯೊವೊಂದನ್ನು ತಯಾರಿಸಿ ಬಿಡುಗಡೆ ಮಾಡಿದೆ ಚಿತ್ರತಂಡ. ಈ ವಿಡಿಯೊದಲ್ಲಿ ನಾಳೆ ಬೆಳಿಗ್ಗೆ 8.14ಕ್ಕೆ ರೆಡಿಯಾಗಿ ಇರುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ ಚಾರ್ಮಿ ಹಾಗೂ ಅನನ್ಯಾ.

ಈಗಾಗಲೇ ಅನೇಕ ದೊಡ್ಡ ಬಜೆಟ್‌ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ತಿಳಿಸಿವೆ. ಈಗ ವಿಜಯ್‌ ಹಾಗೂ ಪುರಿ ಕಾಂಬಿನೇಷನ್‌ನ ಲೈಗರ್ ಯಾವಾಗ ತೆರೆ ಮೇಲೆ ಬರಲಿದೆ ಎಂಬುದು ನಾಳೆ ತಿಳಿಯಲಿದೆ. ಈ ಸಿನಿಮಾಕ್ಕಾಗಿ ವಿಜಯ್‌ ಮಾರ್ಷಲ್ ಆರ್ಟ್ ತರಬೇತಿಯನ್ನು ಪಡೆದಿದ್ದರು.

ಇದು ವಿಜಯ್‌ಗೆ ಮೊದಲ ಬಾಲಿವುಡ್‌ ಸಿನಿಮಾ. ಬುಡ್ಡಾ ಹೋಗಾ ತೇರಾ ಬಾಪ್ ಸಿನಿಮಾದ ನಂತರ ಪುರಿ ಮತ್ತೆ ಬಾಲಿವುಡ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು