ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ಕೇಳಿ: ‘ಕಬ್ಜ’ ಹಾಡುಗಳಲ್ಲಿ ಮಿಂದ ಉಪ್ಪಿ ಅಭಿಮಾನಿಗಳು

Last Updated 27 ಫೆಬ್ರುವರಿ 2023, 11:03 IST
ಅಕ್ಷರ ಗಾತ್ರ

ಬೆಂಗಳೂರು: ಉಪೇಂದ್ರ, ‘ಕಿಚ್ಚ’ ಸುದೀಪ್ ಮತ್ತು ಶ್ರಿಯಾ ಸರಣ್‌ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಮಾರ್ಚ್‌ 17ರಂದು ಬಿಡುಗಡೆಯಾಗಲಿದೆ.

ಈ ಬೆನ್ನಲೇ ಸಿನಿಮಾದ ಆಡಿಯೊ ಬಿಡುಗಡೆ ಮಾಡಲಾಗಿದೆ. ಭಾನುವಾರ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ 7 ಗಂಟೆಗೆ ಸ್ಯಾಂಡಲ್‌ವುಡ್‌ ಗಣ್ಯರು ಹಾಗೂ ಚಿತ್ರರಂಗದ ದಿಗ್ಗಜ ಕಲಾವಿದರ ಸಮ್ಮುಖದಲ್ಲಿ ಆಡಿಯೊ ಬಿಡುಗಡೆಲಾಯಿತು.

ಈ ಹಿಂದೆ ಚಿತ್ರತಂಡ ಎರಡು ಹಾಡುಗಳನ್ನು ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ರಿಲೀಸ್‌ ಮಾಡಿತ್ತು. ನಿನ್ನೆ ಅದ್ಧೂರಿಯಾಗಿ ಆಡಿಯೊ ಲಾಂಚ್‌ ಮಾಡಲಾಯಿತು.

ಟ್ರೈಲರ್‌ ಬಿಡುಗಡೆ ಬಳಿಕ ಸಾಕಷ್ಟು ನಿರೀಕ್ಷೆಯನ್ನು ಭಾರತೀಯ ಚಿತ್ರರಂಗದಲ್ಲಿ ‘ಕಬ್ಜ’ ಹುಟ್ಟುಹಾಕಿದೆ. ಮಾ.17ರಂದು ವಿಶ್ವದಾದ್ಯಂತ ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಗಪ್ಪಳಿಸಲು ಚಿತ್ರವು ಸಜ್ಜಾಗಿದೆ.

ರವಿ ಬಸ್ರೂರು ಅವರ ಸಂಗೀತ ಇರುವ ಚಿತ್ರವನ್ನು ಆರ್‌. ಚಂದ್ರು ನಿರ್ದೇಶನ ಮಾಡಿದ್ದಾರೆ.

ಒಂಬತ್ತು ಭಾಷೆಗಳಲ್ಲಿ ‘ಕಬ್ಜ’ ತೆರೆಕಾಣಲಿದ್ದು, ಅತಿ ಹೆಚ್ಚು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವ ಕನ್ನಡದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆಯೂ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT