ಶನಿವಾರ, ಸೆಪ್ಟೆಂಬರ್ 18, 2021
26 °C

ತೆರೆಗೆ ಬರಲಿದೆ ಗಂಗೂಲಿ ಜೀವನಾಧಾರಿತ ಸಿನಿಮಾ:ಇಲ್ಲಿದೆ ನಿರ್ಮಾಣ, ತಾರಾಗಣದ ವಿವರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ಜೀವನಚರಿತ್ರೆ ಆಧಾರಿತ ಸಿನಿಮಾದ ಕೆಲಸಗಳು ಆರಂಭವಾಗಿವೆ. ಚಿತ್ರವನ್ನು ‘ಲುವ್ ಫಿಲ್ಮ್ಸ್’ ನಿರ್ಮಿಸುತ್ತಿದೆ.

ದಾದಾ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಗಂಗೂಲಿ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡವರು. ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಚಲನಚಿತ್ರ ನಿರ್ಮಾಪಕ ಲುವ್ ರಂಜನ್ ಮತ್ತು ಅಂಕುರ್ ಗಾರ್ಗ್ ಸ್ಥಾಪಿಸಿರುವ ‘ಲುವ್ ಫಿಲ್ಮ್ಸ್’ ಗಂಗೂಲಿ ಅವರ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತರುತ್ತಿದ್ದು, ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

‘ಲುವ್ ಫಿಲ್ಮ್ಸ್’ ದಾದಾ ಸೌರವ್ ಗಂಗೂಲಿ ಅವರ ಜೀವನಚರಿತ್ರೆಯ ಸಿನಿಮಾ ನಿರ್ಮಾಣ ಮಾಡುತ್ತಿದೆ ಎಂದು ನಾವು ಸಂತೋಷದಿಂದ ಘೋಷಿಸುತ್ತಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಕ್ಕೆ ನಮಗೆ ಹೆಮ್ಮೆ ಎನಿಸಿದೆ. ಉತ್ತಮ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇವೆ’ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸೌರವ್‌ ಗಂಗೂಲಿ, ‘ಕ್ರಿಕೆಟ್ ನನ್ನ ಜೀವನದಲ್ಲಿ ಎಲ್ಲವೂ ಆಗಿತ್ತು. ತಲೆಯನ್ನು ಮೇಲೆತ್ತಿ ನಡೆಯುವಷ್ಟು ಸಾಮರ್ಥ್ಯ, ಆತ್ಮಸ್ಥೈರ್ಯವನ್ನು ಅದು ನನಗೆ ನೀಡಿದೆ,’ ಎಂದಿದ್ದಾರೆ.

ಸಿನಿಮಾದ ತಾರಾಗಣದ ಬಗ್ಗೆ ನಿರ್ಮಾಣ ಸಂಸ್ಥೆಯಿಂದಾಗಲಿ, ಸೌರವ್‌ ಗಂಗೂಲಿ ಅವರಿಂದಾಗಲಿ ಮಾಹಿತಿ ಲಭ್ಯವಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು