ಗುರುವಾರ , ನವೆಂಬರ್ 14, 2019
19 °C

ಆ್ಯಂಬುಲೆನ್ಸ್‌ ಸಿಗದೆ ಕೊನೆಯುಸಿರೆಳೆದ ನಟಿ, ಆಕೆಯ ಮಗು

Published:
Updated:
prajavani

ಮುಂಬೈ: ಆ್ಯಂಬುಲೆನ್ಸ್‌ ಸಿಗದೆ ಗರ್ಭಿಣಿಯನ್ನು ಬೈಕ್‌ನಲ್ಲಿ ಕರೆದೊಯ್ದದ್ದು, ಹೆಗಲ ಮೇಲೆ ಶವ ಹೊತ್ತು ಸಾಗಿದ, ಅನಾರೋಗ್ಯ ಪೀಡಿತ ಪತಿಯನ್ನು ಎತ್ತಿನಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆಗಳು ಮಾಸುವ ಮುನ್ನವೇ, ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗದೆ ನಟಿ ಹಾಗೂ ಆಕೆಯ ಮಗು ಮೃತಪಟ್ಟ ಘಟನೆ ಹಿಂಗೊಲಿ ಜಿಲ್ಲೆಯಲ್ಲಿ ನಡೆದಿದೆ.

ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗದಿದ್ದರಿಂದ 25 ವರ್ಷದ ಮರಾಠಿ ನಟಿ ಪುಜಾ ಜುಂಜಾರ್ ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಮುಂಬೈನಿಂದ ಸುಮಾರು 600 ಕಿ.ಮೀ ದೂರದಲ್ಲಿರುವ ಹಿಂಗೊಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಆ್ಯಂಬುಲೆನ್ಸ್ ಸೌಕರ್ಯವಿಲ್ಲದ ಕಾರಣ ಮೃತದೇಹದ ಎಲುಬು ಮುರಿದು ಮೂಟೆ ಕಟ್ಟಿ ಹೊತ್ತೊಯ್ದರು!

‘ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್‌ ಸಿಕ್ಕಿದಿದ್ದರೆ, ಆಕೆ ಬದುಕಿರುತ್ತಿದ್ದಳು’ ಎಂದು ನಟಿ ಪುಜಾ ಜುಂಜಾರ್ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ. 

‘ಜುಂಜಾರ್‌ಗೆ ಮಧ್ಯರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಗೊರೆಗಾಂವ್‌ನಲ್ಲಿನ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಹೆರಿಗೆಯಾದ ಮರುಕ್ಷಣವೇ ಮಗು ಮೃತಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆ್ಯಂಬುಲೆನ್ಸ್ ಇಲ್ಲ, ಗರ್ಭಿಣಿಯನ್ನು ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದೊಯ್ದ ಕುಟುಂಬ

‘ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯರು, ಜುಂಜಾರ್‌ ಅನ್ನು ತಕ್ಷಣ ಹಿಂಗೊಲಿಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲು ಆಕೆಯ ಕುಟುಂಬ ಸದಸ್ಯರಿಗೆ ತಿಳಿಸಿದರು. ಅಲ್ಲಿಂದ 40 ಕಿ.ಮೀ ದೂರದಲ್ಲಿನ ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ಗಾಗಿ ಕುಟುಂಬದವರು ಸಾಕಷ್ಟು ಪರದಾಡಿದರು. ಕಷ್ಟಪಟ್ಟು ಖಾಸಗಿ ಆ್ಯಂಬುಲೆನ್ಸ್‌ ಮಾಡಿ, ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಜುಂಜಾರ್‌ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)