ಭಾನುವಾರ, ಆಗಸ್ಟ್ 25, 2019
°C

ಮರಾಠಿ ಮಹಿಳೆ ಕೃತಿ ಸನನ್‌

Published:
Updated:

ನಟಿ ಕೃತಿ ಸನನ್‌, ವಿನಿಲ್‌ ಮ್ಯಾಥ್ಯೂ ನಿರ್ದೇಶನದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹಾಸ್ಯಪ್ರಧಾನ ಚಿತ್ರ ‘ಅರ್ಜುನ್‌ ಪಟಿಯಾಲ’ ಬಳಿಕ ಅರ್ಜುನ್‌ ಕಪೂರ್‌ ನಾಯಕನಾಗಿ ನಟಿಸುತ್ತಿರುವ ‘ಪಾಣಿಪತ್‌’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈಗ ವಿನಿಲ್‌ ಮ್ಯಾಥ್ಯೂ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಅವರು ಸಹಿ ಮಾಡಿದ್ದಾರೆ. 

ಇದರಲ್ಲಿ ಸವಿತಾ ಬಾಯಿ ಎಂಬ ಮರಾಠ ಮಹಿಳೆಯ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಮರಾಠಿ ಭಾಷೆಯನ್ನು ಕಲಿಯುವ ಉತ್ಸಾಹದಲ್ಲಿದ್ದಾರೆ. 

ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ‘ಝೀರೊ’ ಸಿನಿಮಾದ ನಿರ್ದೇಶಕ ಆನಂದ್‌ ಎಲ್‌ ರಾಯ್‌. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ನಾಯಕ ಯಾರು ಎಂದೂ ಹೇಳಿಲ್ಲ. 

Post Comments (+)