ನಟ ಪುನೀತ್ ರಾಜ್ಕುಮಾರ್ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದ ಟೈಟಲ್ ಹಾಡಿಗೆ ಅಮೆರಿಕದ ಸಾತ್ ಕೊರಿಯೊಗ್ರಾಫಿ ತಂಡ ನೃತ್ಯ ಮಾಡಿ ವಿಡಿಯೊ ಬಿಡುಗಡೆಗೊಳಿದೆ. ಈ ವಿಡಿಯೊ ವೈರಲ್ ಆಗಿದ್ದು, ಇದನ್ನು ಪುನೀತ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಸಿನಿಮಾದ ಹಾಡಿಗೆ ಮಾಡಿರುವ ಈ ವಿಡಿಯೊ ನೋಡಿ ಖುಷಿಯಾಗಿರುವ ಅಪ್ಪು, ‘ಈ ವಿಡಿಯೊ ನೋಡಿದೆ, ತುಂಬಾ ಇಷ್ಟವಾಯ್ತು; ಅಮೆರಿಕಾದಲ್ಲಿ ಮಾರ್ಚ್ 6ರಂದು ಮಾಯಾಬಜಾರ್ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ಬರೆದು ವಿಡಿಯೊ ಹಂಚಿಕೊಂಡಿದ್ದಾರೆ.

ಪುನೀತ್ ಅವರ ಈ ವಿಡಿಯೊಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಾತ್ ಕೊರಿಯೊಗ್ರಾಫಿ ತಂಡ ಈ ಹಿಂದೆ ಸುದೀಪ್ ಅಭಿನಯದ ಪೈಲ್ವಾನ್, ತೆಲುಗಿನ ಓಬೇಬಿ ಹಾಗೂ ಹಲವು ದಕ್ಷಿಣ ಭಾರತದ ಸಿನಿಮಾಗಳ ಹಾಡಿಗೆ ನೃತ್ಯ ಮಾಡಿದ್ದರು.

ಈ ಹಿಂದೆಯೂ ಪುನೀತ್ ತಮ್ಮ ಅಭಿಮಾನಿಗಳು ಅವರಿಗಾಗಿ ಮಾಡಿದ ವಿಡಿಯೊಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.