ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘನಾ ರಾಜ್‌ ಜನ್ಮದಿನ: ಮೇಘನಾಗಿಂತ ‘ಚಿರು‘ 6 ವರ್ಷ ದೊಡ್ಡವರು...

Last Updated 3 ಮೇ 2022, 6:28 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಮೇಘನಾ ರಾಜ್‌ ಇಂದು (ಮೇ 3) 32ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸಿನಿಮಾರಂಗದ ಗಣ್ಯರು ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಪುತ್ರ ರಾಯನ್‌ ಜೊತೆಯಲ್ಲಿ ಮೇಘನಾ ರಾಜ್‌ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.ಪತಿ, ದಿವಂಗತ ನಟ ಚಿರಂಜೀವಿ ಸರ್ಜಾ ನಿಧನರಾಗಿ 2 ವರ್ಷಗಳ ಕಳೆದಿವೆ.2020ಜೂನ್‌ 7ರಂದು ಚಿರಂಜೀವಿ ಮೃತಪಟ್ಟಿದ್ದರು. ಚಿರು ಅಗಲಿಕೆ ನೋವಲ್ಲೇ 2 ವರ್ಷ ಕಳೆದಿರುವ ಮೇಘನಾ ಮತ್ತೆ ಸಿನಿಮಾರಂಗಕ್ಕೆ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗಿದೆ.

ಚಿರು ಹಾಗೂ ಮೇಘನಾ ಪರಸ್ಪರ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಮೇಘನಾಗಿಂತ ಚಿರು 6 ವರ್ಷ ದೊಡ್ಡವರು.

ಸೋಮವಾರ(ಮೇ 2)ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಅವರ 4ನೇ ವಿವಾಹ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಅವರು ಇನ್‌ಸ್ಟಾಗ್ರಾಂನಲ್ಲಿ ಚಿರು ಜೊತೆಗಿರುವ ಫೋಟೊವನ್ನು ಶೇರ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT