ಬುಧವಾರ, ಮೇ 25, 2022
29 °C

ಡಾರ್ಲಿಂಗ್‌ ಕೃಷ್ಣ– ಮಿಲನಾ ನಾಗರಾಜ್‌ ಮದುವೆ ಫೋಟೋ ನೋಡ್ತೀರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲವ್‌ ಮಾಕ್ಟೇಲ್‌ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಮದುವೆ ಬೆಂಗಳೂರಿನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಭಾನುವಾರ ನಡೆಯಿತು.

ಲವ್‌ ಮಾಕ್ಟೇಲ್‌ ಚಿತ್ರ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ ನಿರ್ಧರಿಸಿದ್ದ ಜೋಡಿ ಕಳೆದ ವರ್ಷ ತಮ್ಮ ಮದುವೆಯ ದಿನಾಂಕ ಘೋಷಿಸಿತ್ತು.

ಸಾಂಪ್ರದಾಯಿಕ ರೇಷ್ಮೆ ಸೀರೆ ಧರಿಸಿ ಆಭರಣಗಳಿಂದ ಮಿಲನಾ ಕಂಗೊಳಿಸುತ್ತಿದ್ದರು. ಕೃಷ್ಣ ಅವರು ಸಾಂಪ್ರದಾಯಿಕ ಕುರ್ತಾ ಮತ್ತು ಧೋತಿ ಧರಿಸಿದ್ದರು. ಇಬ್ಬರ ಮೊಗದಲ್ಲೂ ಸಂತಸದ ನಗು ಆವರಿಸಿತ್ತು. ಭಾನುವಾರ ಬೆಳಿಗ್ಗೆ ಮುಹೂರ್ತ ನಡೆದಿದೆ. ಮದುವೆಯಲ್ಲಿ ಸೀಮಿತ ಸಂಖ್ಯೆಯ ಬಂಧುಗಳು, ಆಪ್ತರು ಸೇರಿದ್ದರು. ಇದೇ ಸಂದರ್ಭ ‘ಲವ್‌ ಮಾಕ್ಟೇಲ್‌–2’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ಈ ಜೋಡಿ ಹೇಳಿದೆ.

<

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು