ಮಂಗಳವಾರ, ಮೇ 11, 2021
25 °C

ಅಮೆಜಾನ್ ಪ್ರೈಂನಲ್ಲಿ ‘ಎಂಎಂಒಎಫ್‌’ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರ್‌ಆರ್‌ಆರ್‌ ಪ್ರೊಡಕ್ಷನ್ಸ್ ಮತ್ತು ಜೆಕೆ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ‘ಎಂಎಂಒಎಫ್‌’ ಚಿತ್ರವು ಓಟಿಟಿಯಲ್ಲಿ ಬಿಡುಗಡೆ ಆಗಿದೆ.

ತೆಲುಗು ಭಾಷೆಯ ಈ ಚಿತ್ರವು ತಮಿಳು ಮತ್ತು ಕನ್ನಡಕ್ಕೆ ಡಬ್ ಆಗಿ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಯನ್.ಎಸ್.ಸೀ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಜೆ.ಡಿ.ಚಕ್ರವರ್ತಿ ನಾಯಕನಾಗಿ ನಟಿಸಿದ್ದಾರೆ. ಫೆಬ್ರುವರಿ 24ರಂದು ಚಿತ್ರಮಂದಿರದಲ್ಲಿ ತೆರೆಕಂಡಿದ್ದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿತ್ರಮಂದಿರವೊಂದರಲ್ಲಿ ನಡೆಯುವ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದ್ದು, ನಿರ್ದೇಶಕರು ರೋಚಕವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಚಿತ್ರಕ್ಕೆ ಗರುಡವೇಗ ಅಂಜಿ ಛಾಯಾಗ್ರಹಣ, ಸಾಯಿ ಕಾರ್ತಿಕ್ ಸಂಗೀತ, ಸವುಲು ವೆಂಕಟೇಶ್ ಸಂಕಲನ, ಜೋ ಜೋ ನೃತ್ಯ ನಿರ್ದೇಶನ, ಅವಿನಾಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ರಾಜಶೇಖರ್, ಜೆಡಿ ಕಾಸಿಮ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಇನ್ನುಳಿದಂತೆ ತಾರಾಗಣದಲ್ಲಿ ಜೆಡಿ ಚಕ್ರವರ್ತಿ, ಅಕ್ಷತಾ, ಮನೋಜ್ ನಂದನ್, ಅಕ್ಷಿತ ಮುದ್ಗಲ್, ಬ್ಯಾನರ್ಜಿ, ಕಿರಾಕ್ ಆರ್ಪಿ, ಚಮ್ಮಕ್ ಚಂದ್ರ, ಶ್ರೀರಾಮ್ ಚಂದ್ರ, ಸಂಪೂರ್ಣೆಶ್ ಬಾಬು, ರಾಜೀವ್, ತಾರ್ಜನ್, ಗೌತಮ್ ಮತ್ತು ರಾಜು ನಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು