ಭಾನುವಾರ, ಫೆಬ್ರವರಿ 23, 2020
19 °C

ಮೋಹನ್‌ ಲಾಲ್ ಹೊಸ ಲುಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಯಾಳಂ ನಟ ಮೋಹನ್‌ ಲಾಲ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಒಡಿಯನ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಇದರಲ್ಲಿ ಮೋಹನ್‌ಲಾಲ್‌ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಟೀಸರ್‌ನಲ್ಲಿ ಮೋಹನ್‌ಲಾಲ್‌ ನಟನೆಯ ಒಂದೆರಡು ಸೆಕೆಂಡಿನ ದೃಶ್ಯವಿದೆ. ಕೋಪಿಷ್ಟ ಮೋಹನ್‌ ಕಂಬಳಿ ಹೊದ್ದುಕೊಂಡು ಮುನ್ನಡೆಯುತ್ತಾರೆ. ಹಿಂಬಾಗದಲ್ಲಿ ದೊಡ್ಡ ಮನೆಯನ್ನು ಧಿಕ್ಕರಿಸಿ ಹೋಗುವಂತೆ ಕಾಣುತ್ತದೆ. ಈ ಟೀಸರ್‌ನಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದು, ಚಿತ್ರ ಅಕ್ಟೋಬರ್‌ 11ರಂದು ತೆರೆಕಾಣಲಿದೆ. 

‘ಒಡಿಯನ್‌’ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸುದ್ದಿ ಮಾಡಿತ್ತು. ಈ ಸಿನಿಮಾದಲ್ಲಿ ಮೋಹನ್‌ಲಾಲ್‌ ಅವರು ಯುವಕ, ಮದ್ಯವಯಸ್ಕ ಹಾಗೂ ಮುದುಕ ಹೀಗೆ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಆಂಗಿಕ ಕಸರತ್ತು ಮೂಲಕ 18 ಕೆ.ಜಿ ತೂಕ ಕಳೆದುಕೊಂಡು ನಟ ಸುದ್ದಿ ಮಾಡಿದ್ದರು. 

ಈಗ ಹೊಸ ಟೀಸರ್‌ನಲ್ಲಿ ಮೋಹನ್‌ಲಾಲ್‌ ಹೊಸ ಲುಕ್‌ ಹಾಗೂ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿರುವುದರಿಂದ ಅವರ ಅಭಿಮಾನಿಗಳಲ್ಲಿ ಚಿತ್ರ ಕುತೂಹಲ ಕೆರಳಿಸಿದೆ. 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು