ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ನಲ್ಲಿ ‘ಗಿಲಿ ಗಿಲಿ’ ಎಂದು ಹಾಡಿ ಕುಣಿದ ಮೌನಿ ರಾಯ್ ಐದನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ‘ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಮೌನಿ, ಬ್ರಹ್ಮಾಸ್ತ್ರ, ಮೇಡ್ ಇನ್ ಚೈನಾ ಮತ್ತು ರಾ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದವರು. ಇದೀಗ ‘ಬೋಲೆ ಚೂಡಿಯಾ’ ಎಂಬ ಹೊಸ ಚಿತ್ರ ಅವರ ಕೈಲಿದೆ.

ನವಾಜುದ್ದೀನ್ ಸಿದ್ದಿಕಿ, ಮೌನಿ ಜೊತೆ ನಾಯಕನಟನಾಗಿ ನಟಿಸಲಿದ್ದಾರೆ. ರಾಜೇಶ್ ಭಾಟಿಯ ಮತ್ತು ಕಿರಣ್ ಭಾಟಿಯ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ನವಾಜುದ್ದೀನ್ ಸಹೋದರ ಶಮಾಸ್ ಸಿದ್ದಿಕಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಿರ್ಮಾಪಕರ ಲೆಕ್ಕಾಚಾರದಂತೆ ಚಿತ್ರೀಕರಣ ಇದೇ ಮೇ ತಿಂಗಳಲ್ಲಿ ಆರಂಭವಾಗಿ ನವರಾತ್ರಿ ಹೊತ್ತಿಗೆ ತೆರೆಕಾಣಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.