ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ವರ್ಷಗಳ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಎಂ.ಎಂ. ಕೀರವಾಣಿ ರಿಎಂಟ್ರಿ

ಮ್ಯಾಜಿಷಿಯನ್‌‘ ಸಿನಿಮಾಕ್ಕೆ ಸಂಗೀತ ನೀಡಲು ಅಣಿಯಾಗಿದ್ದಾರೆ
Published 29 ಮೇ 2023, 7:39 IST
Last Updated 29 ಮೇ 2023, 7:39 IST
ಅಕ್ಷರ ಗಾತ್ರ

ತಿರುವನಂತಪುರ: ಆರ್‌ಆರ್‌ಆರ್ ಸಿನಿಮಾದ ಮೂಲಕ ಜಾಗತಿಕವಾಗಿ ಖ್ಯಾತಿ ಗಳಿಸಿದ, ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಅವರು ಬರೋಬ್ಬರಿ 27 ವರ್ಷಗಳ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಅವರು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ‘ಮ್ಯಾಜಿಷಿಯನ್‌‘ ಸಿನಿಮಾಕ್ಕೆ ಸಂಗೀತ ನೀಡಲು ಅಣಿಯಾಗಿದ್ದಾರೆ. ತಿರುವನಂತಪುರದಲ್ಲಿ ಭಾನುವಾರ ನಡೆದ ಚಿತ್ರದ ಮಹೂರ್ತ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.

1996 ರಲ್ಲಿ ಮಲಯಾಳಂನಲ್ಲಿ ಬಂದಿದ್ದ ‘ದೇವರಾಗಂ’ ಸಿನಿಮಾವೇ ಎಂ.ಎಂ. ಕೀರವಾಣಿ ಅವರ ಕೊನೆಯ ಮಲಯಾಳಂ ಚಿತ್ರವಾಗಿತ್ತು. ಆ ಚಿತ್ರ ಹಿಟ್ ಆಗಿತ್ತು. ‘ಬಹಳ ಗ್ಯಾಪ್‌ನ ನಂತರ ನಾನು ಮಲಯಾಳಂ ಸಿನಿರಂಗಕ್ಕೆ ಬರುತ್ತಿರುವುದು ಖುಷಿ ನೀಡಿದೆ’ ಎಂದು ಕೀರವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT