ಶುಕ್ರವಾರ, ಮಾರ್ಚ್ 31, 2023
32 °C

ಅಮೀರ್ ಖಾನ್ ಜೊತೆ 'ಲಾಲ್ ಸಿಂಗ್ ಚಡ್ಡಾ' ಚಿತ್ರ ತಂಡ ಸೇರಿಕೊಂಡ ನಾಗ ಚೈತನ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಇಂದಿನಿಂದ ಕಾರ್ಗಿಲ್‌ನಲ್ಲಿ ಚಿತ್ರೀಕರಣ ಆರಂಭವಾಗಿರುವ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ಚಿತ್ರದ ತಾರಾಗಣಕ್ಕೆ ತೆಲುಗು ತಾರೆ ನಾಗ ಚೈತನ್ಯ ಸೇರ್ಪಡೆಯಾಗಿದ್ದಾರೆ.

ಈ ಚಿತ್ರವು ಹಾಲಿವುಡ್‌ನ ಹಿರಿಯ ನಟ ಟಾಮ್ ಹ್ಯಾಂಕ್ಸ್ ಅವರ 1994ರ ವಿಶಿಷ್ಟ ಚಿತ್ರ ‘ಫಾರೆಸ್ಟ್ ಗಂಪ್’ನ ರಿಮೇಕ್ ಆಗಿದೆ.

‘100% ಲವ್’, ‘ಮನಂ’, ‘ಮಜಿಲಿ’, ‘ವೆಂಕಿ ಮಾಮಾ’ ಮುಂತಾದ ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ 34 ವರ್ಷದ ನಾಗ ಚೈತನ್ಯ, ಅಮೀರ್ ಖಾನ್ ಜೊತೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಚಿತ್ರದ ಮೂಲಕ ತೆಲುಗು ನಟ ಚೈತನ್ಯ ಬಾಲಿವುಡ್‌ಗೆ ಎಂಟ್ರಿ ಪಡೆಯುತ್ತಿದ್ದು, ಅಮೀರ್ ಖಾನ್ ಅವರ ಮುಖ್ಯ ಪಾತ್ರದ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮೀರ್ ಖಾನ್, ನಿರ್ಮಾಪಕಿ ಕಿರಣ್ ರಾವ್ ಮತ್ತು ನಿರ್ದೇಶಕ ಅದ್ವೈತ್ ಚಂದನ್ ಅವರ ಜೊತೆಗಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿರುವ ನಾಗ ಚೈತನ್ಯ #ಲಾಲ್‌ಸಿಂಗ್ಚಡ್ಡಾ ಅಮೀರ್ ಖಾನ್ ಪ್ರೊಡಕ್ಷನ್ಸ್‌ಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲೂ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದು, ನಾಗಚೈತನ್ಯಗೆ ಸ್ವಾಗತ ಕೋರಿದ್ದಾರೆ.

‘ಸ್ವಾಗತ ಬಾಲಾ, ಹೃದಯಗಳನ್ನು ಕದಿಯುವವ, ನೀವು ಈಗಾಗಲೇ ನಮ್ಮ ಪ್ರೀತಿಯನ್ನು ಕದ್ದಿದ್ದೀರಿ' ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು