‘ನಮ್ಮ ಗಣಿ ಬಿ.ಕಾಂ ಪಾಸ್’ ಆಗಸ್ಟ್‌ನಲ್ಲಿ

ಮಂಗಳವಾರ, ಜೂನ್ 18, 2019
31 °C

‘ನಮ್ಮ ಗಣಿ ಬಿ.ಕಾಂ ಪಾಸ್’ ಆಗಸ್ಟ್‌ನಲ್ಲಿ

Published:
Updated:
Prajavani

ಉಪೇಂದ್ರ ಅಭನಯದ ‘2nd ಹಾಫ್’ ಚಿತ್ರ ನಿರ್ಮಿಸಿದ್ದ ನಾಗೇಶ್ ಕುಮಾರ್ ಅವರು ಈಗ ಇನ್ನೊಂದು ಚಿತ್ರವನ್ನು ವೀಕ್ಷಕರ ಎದುರು ಇರಿಸಲು ಸಜ್ಜಾಗಿದ್ದಾರೆ. ಅವರ ನಿರ್ಮಾಣದ ಹೊಸ ಚಿತ್ರದ ಹೆಸರು ‘ನಮ್ಮ ಗಣಿ ಬಿ.ಕಾಂ ಪಾಸ್’. ಈ ಚಿತ್ರದ ರೀರೆಕಾರ್ಡಿಂಗ್ (ಮಾತಿನ ಮರುಲೇಪ) ಕೆಲಸ ಬೆಂಗಳೂರಿನ ವಿಜಯ ಸ್ಟುಡಿಯೋನಲ್ಲಿ ಪೂರ್ಣಗೊಂಡಿದೆ.

ಈ ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ ಎಂದು ನಾಗೇಶ್ ಹೇಳಿದ್ದಾರೆ. ನಾಗರಾಜ್ (ಸಾಮ್ರಾಟ್) ಛಾಯಾಗ್ರಹಣ, ವಿಕಾಸ್‍ ವಸಿಷ್ಠ ಸಾಹಿತ್ಯ ಹಾಗೂ ಸಂಗೀತ ಚಿತ್ರಕ್ಕಿದೆ. ಅಂದಹಾಗೆ, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿರುವ ಅಭಿಷೇಕ್ ಶೆಟ್ಟಿ ನಾಯಕ ನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಐಶಾನಿ ಶೆಟ್ಟಿ, ಪಲ್ಲವಿ ಗೌಡ, ಸುಚೇಂದ್ರ ಪ್ರಸಾದ್, ಜಹಂಗೀರ್, ಸುಧಾ ಬೆಳವಾಡಿ, ಮಂಜುನಾಥ ಹೆಗಡೆ, ಶಂಕರ್ ಅಶ್ವತ್ಥ್, ದಿನೇಶ್ ಮಂಗಳೂರು, ಆಶಾರಾಣಿ, ರಘು ಪಣೀಶ್ವರ್ ಚಿತ್ರದ ತಾರಾಬಳಗದಲ್ಲಿ ಇದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !