ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಘನತ್ಯಾಜ್ಯ ಸಮಸ್ಯೆ: ಪ್ರಧಾನಿ ಕಚೇರಿಗೆ ನಟ ಅನಿರುದ್ಧ ಪತ್ರ

Last Updated 25 ಮೇ 2022, 13:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ಘನತ್ಯಾಜ್ಯ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನಟ ಅನಿರುದ್ಧ ಜತ್ಕರ್‌ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ.

ಪತ್ರದ ಪ್ರತಿಯನ್ನು ಅನಿರುದ್ಧ ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ‘ಸ್ವಚ್ಛತೆ, ನಗರದ ಸೌಂದರ್ಯ ಹಾಗೂ ಪರಿಸರ ಸಂರಕ್ಷಣೆ ಹಾಗೂ ಜನರ ಸುರಕ್ಷತೆಗಾಗಿ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ಇದೆ’ ಎಂದು ಆಗ್ರಹಿಸಿದ್ದಾರೆ.

ಕಳೆದೆರಡು ವರ್ಷದಿಂದ #ಸ್ವಚ್ಛತೆಗಾಗಿನಾನೂಸಹಭಾಗಿ ಎಂಬ ಹ್ಯಾಷ್‌ಟ್ಯಾಗ್‌ನಡಿ ರಸ್ತೆಯಲ್ಲಿ ಎಸೆದಿರುವ ಘನತ್ಯಾಜ್ಯದ ಚಿತ್ರ ಹಾಗೂ ವಿಡಿಯೊಗಳನ್ನು ಅನಿರುದ್ಧ ಅವರುಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಈ ಅಭಿಯಾನದಡಿ ಹಲವರು ಇದೇ ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ನಗರಗಳಲ್ಲಿನ ಘನತ್ಯಾಜ್ಯ ನಿರ್ವಹಣೆ ಲೋಪವನ್ನು ಸ್ಥಳೀಯ ಆಡಳಿತ ಸಂಸ್ಥೆಯ ಮುಂದಿಡುತ್ತಿದ್ದಾರೆ.

‘ಬೆಂಗಳೂರಿನಲ್ಲಿ ಹದಗೆಟ್ಟಿರುವ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ತಮ್ಮ ಗಮನಸೆಳೆಯಲು ಈ ಪತ್ರ ಬರೆದಿದ್ದೇನೆ. ನಗರದ ಬಹುತೇಕ ರಸ್ತೆಗಳು ಕಸದ ತೊಟ್ಟಿಯಾಗಿದ್ದು, ನಗರದ ಸೌಂದರ್ಯವನ್ನು ಕೆಡಿಸುವುದಲ್ಲದೆ ಜನರ ಆರೋಗ್ಯಕ್ಕೂ ಇವು ಹಾನಿಕರವಾಗಿದೆ. ಕಸ ಸುರಿದಿರುವ ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ ಬಳಿಕ ಬಿಬಿಎಂಪಿ ಆ ಸ್ಥಳಗಳನ್ನು ಸ್ವಚ್ಛ ಮಾಡುತ್ತಿದೆ. ಆದರೆ ಕೆಲ ದಿನಗಳಲ್ಲಿ ಅದೇ ಸ್ಥಳ ಮತ್ತೆ ಕಸದ ತೊಟ್ಟಿಯಾಗುತ್ತಿದೆ. ಈ ಅಭಿಯಾನದ ಜೊತೆಗೆ ಪಾದಚಾರಿ ಮಾರ್ಗದ ಒತ್ತುವರಿ, ತಡೆಗೋಡೆಗಳಿಲ್ಲದ ಟ್ರಾನ್ಸ್‌ಫಾರ್ಮರ್‌ಗಳ ಬಗ್ಗೆ #ಸುರಕ್ಷತೆಗಾಗಿನಾನೂಸಹಭಾಗಿ ಮತ್ತು #ಸೌಂದರ್ಯಕ್ಕಾಗಿನಾನೂಸಹಭಾಗಿ ಎಂಬ ಅಭಿಯಾನವನ್ನೂ ನಾನು ಆರಂಭಿಸಿದ್ದೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಅಗತ್ಯವಿದ್ದು, ಪ್ರತ್ಯೇಕ ಸಚಿವಾಲಯಗಳಿದ್ದರಷ್ಟೇ ಇವು ಸಾಧ್ಯ’ ಎಂದು ಅನಿರುದ್ಧ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT