ಪತ್ನಿಯ ಚಿತ್ರದಲ್ಲಿ ಪೃಥ್ವಿರಾಜ್ ವಿಜ್ಞಾನಿ

7

ಪತ್ನಿಯ ಚಿತ್ರದಲ್ಲಿ ಪೃಥ್ವಿರಾಜ್ ವಿಜ್ಞಾನಿ

Published:
Updated:
Prajavani

ಮಲಯಾಳಂ ಚಿತ್ರರಂಗದಲ್ಲಿ ಎಲ್ಲಾ ಬಗೆಯ ಚಿತ್ರಗಳು ನಿರ್ಮಾಣಗೊಂಡರೂ ವೈಜ್ಞಾನಿಕ ಚಿತ್ರಗಳಿಗೆ ಕೊರತೆ ಇತ್ತು. ನಟ, ನಿರ್ದೇಶಕ, ನಿರ್ಮಾಪಕ, ಹಿನ್ನೆಲೆ ಗಾಯಕ ಪೃಥ್ವಿರಾಜ್‌ ಸುಕುಮಾರನ್‌ ಈ ಕೊರತೆಯನ್ನು ನೀಗುತ್ತಿದ್ದಾರೆ. ಪೃಥ್ವಿ ನಟನೆಯ ‘ನೈನ್‌’ ಸಿನಿಮಾ ವೈಜ್ಞಾನಿಕ ಕಾಲ್ಪನಿಕ ವಸ್ತುವನ್ನೊಳಗೊಂಡ ಚಿತ್ರ. 

ಅದಕ್ಕಿಂತಲೂ ಆಸಕ್ತಿಯ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ಪೃಥ್ವಿ ಈ ಚಿತ್ರದಲ್ಲಿ ವಿಜ್ಞಾನಿ ಆಲ್ಬರ್ಟ್‌ ಪಾತ್ರ ಮಾಡಿದ್ದಾರೆ. ‘ನೈನ್‌’ಗೆ ಬಂಡವಾಳ ಹೂಡಿರುವುದು ಪೃಥ್ವಿ ಪತ್ನಿ ಸುಪ್ರಿಯಾ ಮೆನನ್. 

‘ನಮ್ಮ ಚಿತ್ರರಂಗದಲ್ಲಿ ವೈಜ್ಞಾನಿಕ ವಸ್ತುವುಳ್ಳ ಚಿತ್ರಗಳನ್ನು ನಿರ್ಮಿಸುವ ಪ್ರಯತ್ನ ನಡೆದಿಲ್ಲ. ‘ನೈನ್‌’ ಈ ಕೊರತೆಯನ್ನು ನೀಗಲಿದೆ.  ಸೈನ್ಸ್‌ ಫಿಕ್ಷನ್‌ ಹಾರರ್‌ ಥ್ರಿಲ್ಲರ್‌ ಚಿತ್ರವಾಗಿ ಮೂಡಿಬಂದಿದೆ. ಚಿತ್ರೀಕರಣ ಮುಗಿದಿದ್ದು ನಿರ್ಮಾಣೋತ್ತರ ಕೆಲಸಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ನಮ್ಮ ನಿರೀಕ್ಷೆಯಂತೆ ಎಲ್ಲ ಕೆಲಸಗಳು ಮುಗಿದರೆ ಫೆಬ್ರುವರಿ ಏಳರಂದು ‘ನೈನ್‌’ ಬಿಡುಗಡೆಯಾಗಲಿದೆ’ ಎಂದು ಪೃಥ್ವಿ ಹೇಳಿಕೊಂಡಿದ್ದಾರೆ.

ಜೀನಸ್‌ ಮೊಹಮದ್‌ ನಿರ್ದೇಶನದ ‘ನೈನ್‌’ ಟ್ರೇಲರ್‌ ಇದೇ 9ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ವಿಷಯವನ್ನು ಪೃಥ್ವಿರಾಜ್‌ ಅವರೇ ಸಾಮಾಜಿಕ ಮಾಧ್ಯಮಗಳಿಗೆ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಪ್ರಕಾಶ್‌ರಾಜ್‌, ವಾಮಿಖಾ ಗಬಿ, ಮಮತಾ ಮೋಹನ್‌ದಾಸ್‌ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !