ಶುಕ್ರವಾರ, ಏಪ್ರಿಲ್ 16, 2021
31 °C

‘ಧೂಮಪಾನ ಹಾನಿಕಾರಕ’ ಜಾಹೀರಾತಿನ ಬಾಲನಟಿ ‘ಬರ್ಕ್ಲೆ’ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಧೂಮಪಾನ ನಿಮ್ಮ ಜೀವನಕ್ಕೆ ಹಾನಿಕಾರಕ. ನಿಮ್ಮನ್ನು ಇಷ್ಟಪಡುವವರಿಗೂ. ಧೂಮಪಾನಕ್ಕೆ ಬೆಲೆತೆರಬೇಕಾಗುತ್ತದೆ’ ಹೀಗೊಂದು ಜಾಹೀರಾತನ್ನು ಹಲವು ವರ್ಷಗಳ ಹಿಂದೆ ಚಿತ್ರಮಂದಿರಕ್ಕೆ ಭೇಟಿ ನೀಡಿದವರು ಸಿನಿಮಾ ಆರಂಭಕ್ಕೂ ಮುನ್ನ, ಇಂಟರ್‌ವಲ್‌ನಲ್ಲಿ ನೋಡಿಯೇ ಇರುತ್ತೀರಿ.

ಇದರಲ್ಲಿ ಅಭಿನಯಿಸಿದ್ದ ಬಾಲನಟಿ ಸಿಮ್ರನ್‌ ನಾಟೇಕರ್‌ ಇದೀಗ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನವೇ ಕಡ್ಡಾಯವಾಗಿ ಈ ಜಾಹೀರಾತು ಪ್ರಸಾರವಾಗುತ್ತಿತ್ತು. ಇದರಲ್ಲಿ ತಂದೆಯ ಧೂಮಪಾನ ಚಟ ಬಿಡಿಸುವ ಪುಟಾಣಿ ಬಾಲಕಿಯಾಗಿ ನಟಿಸಿದ್ದ ಸಿಮ್ರನ್‌, ನಂತರದಲ್ಲಿ ಅನೇಕ ಜಾಹೀರಾತು, ಧಾರಾವಾಹಿಗಳಲ್ಲಿ ನಟಿಸಿದ್ದರು. ಮುಂಬೈ ಮೂಲದವರಾದ ಇವರು, ‘ಬರ್ಕ್ಲೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದ್ದಾರೆ.

ಸಂತೋಷ್ ಎಂಟರ್‌ಪ್ರೈಸಸ್‌ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಶೀಘ್ರದಲ್ಲೇ ಚಿತ್ರವು ತೆರೆಯ ಮೇಲೆ ಬರಲಿದೆ. ಕರಿಯ, ಗಣಪ, ಕರಿಯ 2ನಂತಹ ಅದ್ಧೂರಿ ಚಿತ್ರಗಳನ್ನು ಬಾಲರಾಜ್‌ ನಿರ್ಮಿಸಿದ್ದಾರೆ. ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರದ ನಿರ್ದೇಶಕರು. ಗಣಪ, ಕರಿಯ 2 ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ನಟ ಚರಣರಾಜ್, ನಟಿ ಶೃತಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು