ಗುರುವಾರ , ಫೆಬ್ರವರಿ 20, 2020
23 °C

ನೇಹಾ ನಟನೆಯ ಓಜಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನೇಹಾ ಸಕ್ಸೇನಾ ಅವರು ಕನ್ನಡ ಸಿನಿಮಾಗಳಿಂದ ದೂರವಾಗಿ ಬಹಳ ಕಾಲ ಆಗಿತ್ತು. ಅವರು ಬೆಂಗಳೂರಿಗೆ ಬಾರದೆಯೇ ಆರು ತಿಂಗಳುಗಳು ಕಳೆದಿದ್ದವು. ಈಗ ಅವರು ಬೆಂಗಳೂರಿಗೂ ಬಂದಿದ್ದಾರೆ, ಕನ್ನಡದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕೂಡ.

ಸಿ.ಜೆ. ವರ್ಧನ್ ನಿರ್ದೇಶನದ ‘ಓಜಸ್’ ಚಿತ್ರದಲ್ಲಿ ನೇಹಾ ಅವರದ್ದು ಪ್ರಧಾನ ಪಾತ್ರ. ಇದು ಮಹಿಳಾ ಕೇಂದ್ರಿತ ಸಿನಿಮಾ. ‘ಹೆಣ್ಣು ತಾನು ಹುಟ್ಟಿದ ಮನೆಗೆ ಹಾಗೂ ಗಂಡನ ಮನೆಗೆ ಬೆಳಕು ತರುತ್ತಾಳೆ ಎಂಬುದು ಚಿತ್ರದ ಕಥೆ. ಓಜಸ್ ಪದದ ಅರ್ಥವೇ ಬೆಳಕು’ ಎನ್ನುತ್ತಾರೆ ವರ್ಧನ್.

ಚಿತ್ರದ ನಾಯಕಿಯು ರಾವಣನ ಒಂದು ಅಂಶವನ್ನು ರಾಮನ ಅಂಶವನ್ನಾಗಿ ಹೇಗೆ ಪರಿವರ್ತಿಸುತ್ತಾಳೆ ಎಂಬದೂ ಕಥೆಯ ಒಂದು ಭಾಗವಂತೆ. ಈ ಚಿತ್ರದ ಚಿತ್ರೀಕರಣವು ಬೆಂಗಳೂರು, ಮದ್ದೂರು ಮತ್ತು ತುಮಕೂರಿನಲ್ಲಿ ನಡೆದಿದೆ.

ಚಿತ್ರವು ಫೆಬ್ರುವರಿ 7ರಂದು ತೆರೆಗೆ ಬರುವ ನಿರೀಕ್ಷೆ ಇದೆ. ‘ತಡವಾಗಿಯಾದರೂ ಚಿತ್ರ ತೆರೆಗೆ ಬರುತ್ತಿದೆ’ ಎಂದು ಹೇಳುತ್ತಾರೆ ನೇಹಾ. ಅವರು ಈಗ ಮಲಯಾಳ ಚಿತ್ರರಂಗದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಕಾರಣ, ಕನ್ನಡ ಚಿತ್ರರಂಗದ ಕಡೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲವಂತೆ. ‘ಅದೇನೇ ಇದ್ದರೂ, ನನ್ನ ಮನಸ್ಸು ಕನ್ನಡದ ಜೊತೆ ಇರುತ್ತದೆ’ ಎನ್ನುವ ಮಾತು ಸೇರಿಸಲು ನೇಹಾ ಮರೆಯುವುದಿಲ್ಲ.

‘ನಿರ್ದೇಶಕರು ಈ ಸಿನಿಮಾದಲ್ಲಿ ಬಹಳ ಸೂಕ್ಷ್ಮ ವಸ್ತುವೊಂದನ್ನು ಕಥೆಯ ರೂಪದಲ್ಲಿ ಹೇಳಿದ್ದಾರೆ. ನಾನು ನನ್ನಿಂದ ಸಾಧ್ಯವಾದಷ್ಟು ಚೆನ್ನಾಗಿ ಅಭಿನಯಿಸಿದ್ದೇನೆ’ ಎಂದರು ನೇಹಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)