ವರಮಹಾಲಕ್ಷ್ಮಿ ಹಬ್ಬಕ್ಕೆ ‘ಪೈಲ್ವಾನ್‌’ ಕುಸ್ತಿ

ಶುಕ್ರವಾರ, ಏಪ್ರಿಲ್ 26, 2019
36 °C

ವರಮಹಾಲಕ್ಷ್ಮಿ ಹಬ್ಬಕ್ಕೆ ‘ಪೈಲ್ವಾನ್‌’ ಕುಸ್ತಿ

Published:
Updated:

ನಟ ಸುದೀಪ್‌ ನಟನೆಯ ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್‌’ ಆಗಸ್ಟ್‌ 9ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದೆ. 

ಎಸ್. ಕೃಷ್ಣ ನಿರ್ದೇಶನದ ಈ ಚಿತ್ರ ಮೇ ತಿಂಗಳ ಮೊದಲ ವಾರವೇ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ಪ್ರಸ್ತುತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಪರಿಣಾಮ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದಂದು ಅಥವಾ ಅದಕ್ಕೂ ಒಂದು ದಿನ ಮೊದಲೇ ಅಂದರೆ ಆಗಸ್ಟ್‌ 8ರಂದು ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಕನ್ನಡ, ಮಲಯಾಳ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ‘ಪೈಲ್ವಾನ್‌’ ಟೈಟಲ್‌ ಇರಲಿದೆ. ಹಿಂದಿಯ ಟೈಟಲ್‌ ಇನ್ನೂ  ಅಂತಿಮಗೊಂಡಿಲ್ಲ. ಇನ್ನೊಂದು ವಾರದೊಂದಿಗೆ ಈ ಭಾಷೆಯ ಟೈಟಲ್‌ ಅನ್ನೂ ಅಂತಿಮಗೊಳಿಸಲಾಗುವುದು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 

ಈ ಮೊದಲು ಮರಾಠಿ, ಭೋಜಪುರಿ, ಬೆಂಗಾಲಿ ಮತ್ತು ಪಂಜಾಬಿ ಭಾಷೆಯಲ್ಲಿಯೂ ‘ಪೈಲ್ವಾನ್‌’ ಚಿತ್ರದ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ, ಈ ಭಾಷೆಯ ಸಿನಿಮಾ ಮಾರುಕಟ್ಟೆಯಲ್ಲಿರುವ ಕೆಲವು ತಾಂತ್ರಿಕ ತೊಡಕು ಮತ್ತು ಸ್ಥಳೀಯ ನಿಯಮಾವಳಿಗಳನ್ನು ಪಾಲಿಸಬೇಕಿದೆ. ಹಾಗಾಗಿ, ಇನ್ನೂ ಈ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !