ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠಾಣ್’ಚಿತ್ರದ ಟ್ರೇಲರ್ ಬಿಡುಗಡೆ: ಸಾಹಸ ದೃಶ್ಯಗಳ ಮೂಲಕ ಗಮನ ಸೆಳೆದ ಶಾರುಖ್

Last Updated 10 ಜನವರಿ 2023, 10:05 IST
ಅಕ್ಷರ ಗಾತ್ರ

ಮುಂಬೈ: ಸುದೀರ್ಘ ಕಾಯುವಿಕೆ ಬಳಿಕ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

2018ರ ‘ಜೀರೊ’ ಸಿನಿಮಾ ಬಳಿಕ ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ತವಕಿಸುತ್ತಿದ್ದ ಅಭಿಮಾನಿಗಳನ್ನು ರಂಜಿಸಲು ಶಾರುಖ್ ಸಜ್ಜಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಜನವರಿ 25ಕ್ಕೆ ತೆರೆಗೆ ಬರಲಿದೆ.

ಭಾರತದ ವಿರುದ್ಧ ಭಯೋತ್ಪಾದನೆಯ ಮಿಷನ್ ಕುರಿತಂತೆ ವಿವರಣೆ ನೀಡುವ ಡಿಂಪಲ್ ಕಪಾಡಿಯಾ ಅವರ ಹಿನ್ನೆಲೆ ಧ್ವನಿಯಿಂದ ಟ್ರೇಲರ್ ಆರಂಭವಾಗುತ್ತದೆ. ಈ ಸಂದರ್ಭ ಗನ್ ಹಿಡಿದು ಶೂಟ್ ಮಾಡುತ್ತಾ ಬರುವ ಜಾನ್ ಅಬ್ರಹಾಂ ಪ್ರವೇಶವಾಗುತ್ತದೆ. ಈತನ ವಿರುದ್ಧ ಹೋರಾಡಲು ಪಠಾಣ್ ಇದ್ದಾನೆ. ಸದ್ಯದಲ್ಲೇ ವನವಾಸ ಮುಗಿಸಲಿದ್ದಾನೆ ಎಂಬ ನಾಯಕನ ಬಗ್ಗೆ ವಿವರಣೆ ಬರುತ್ತದೆ. ಈ ವೇಳೆ, ಶಾರುಖ್ ಸಾಹಸ ದೃಶ್ಯಗಳು, ಮಾಸ್ ಡೈಲಾಗ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ದೀಪಿಕಾ ಪಡುಕೋಣೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ಧಾರೆ.

ಇತ್ತೀಚಿನ ಚಿತ್ರಗಳಲ್ಲಿ ಕಂಡುಬರುವ ವಿಎಫ್‌ಎಕ್ಸ್ ಬಳಸಿಕೊಂಡು ಮಾಡುವ ರೀತಿಯಲ್ಲೇ ಚಿತ್ರದಲ್ಲಿ ಸಾಹಸ ದೃಶ್ಯಗಳನ್ನು ಕಾಣಬಹುದಾಗಿದೆ.

ತಮಿಳು ನಟ ವಿಜಯ್, ತೆಲುಗಿನ ರಾಮಚರಣ್ ಟ್ರೇಲರ್ ಅನ್ನು ಶೇರ್ ಮಾಡಿದ್ದು, ಶಾರುಖ್‌ಗೆ ಶುಭಾಶಯ ಹೇಳಿದ್ದಾರೆ.

ಚಿತ್ರದ ‘ಬೇಷರಂ ರಂಗ್‌’ ಹಾಡಿನಲ್ಲಿ ಕೇಸರಿ ಬಟ್ಟೆ ಬಳಸಿ ದೀಪಿಕಾ ಪಡುಕೋಣೆ ಅವರನ್ನು ಹಾಟ್‌ ಆಗಿ ತೋರಿಸಿದ್ದರ ಬಗ್ಗೆ ವಿವಾದ ಎದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT