ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jailer Showcase: ‘ಜೈಲರ್‌‘ನಲ್ಲಿ ರಜನಿಕಾಂತ್‌ ಅಬ್ಬರ, ಅಭಿಮಾನಿಗಳ ಹರ್ಷೋದ್ಗಾರ

Published 3 ಆಗಸ್ಟ್ 2023, 14:23 IST
Last Updated 3 ಆಗಸ್ಟ್ 2023, 14:23 IST
ಅಕ್ಷರ ಗಾತ್ರ

'ಸೂಪರ್ ಸ್ಟಾರ್‌' ರಜನಿಕಾಂತ್‌ ಅಭಿನಯದ 'ಜೈಲರ್' ಸಿನಿಮಾದ ಟ್ರೈಲರ್‌ (Showcase) ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 

ಈ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಅಭಿನಯಿಸಿದ ಕಾರಣ ಈ ಚಿತ್ರ ಕನ್ನಡಿಗರಿಗೆ ವಿಶೇಷವಾಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 27 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 

ಎರಡು ಶೇಡ್‌ನಲ್ಲಿ ರಜನಿಕಾಂತ್ ಮಿಂಚಿದ್ದಾರೆ. ಭರ್ಜರಿ ಸಾಹಸ ದೃಶ್ಯಗಳು, ಮಾಸ್ ಡೈಲಾಗ್‌ಗಳು, ರಜನಿ ಮ್ಯಾನರಿಸಂನಿಂದಾಗಿ ಟ್ರೈಲರ್‌ ಗಮನ ಸಳೆಯುತ್ತದೆ. ಇದರಲ್ಲಿ ಶಿವಣ್ಣ ಕಾಣಿಸಿಕೊಳ್ಳದಿರುವುದು ಶಿವಣ್ಣ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ನೆಲ್ಸನ್‌ ದಿಲೀಪ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. ಸನ್‌ ಪಿಕ್ಚರ್ಸ್ ಸಂಸ್ಥೆಯು 'ಜೈಲರ್' ಸಿನಿಮಾವನ್ನು ನಿರ್ಮಾಣ ಮಾಡಿದೆ.

ಬಹುದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಶಿವರಾಜ್‌ಕುಮಾರ್, ಮೋಹನ್‌ಲಾಲ್‌, ಜಾಕಿಶ್ರಾಫ್‌, ಸುನೀಲ್‌, ನಾಗಬಾಬು, ರಮ್ಯಾಕೃಷ್ಣ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್‌ 10ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT