ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ನಿಂದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ

Published 2 ಫೆಬ್ರುವರಿ 2024, 9:50 IST
Last Updated 2 ಫೆಬ್ರುವರಿ 2024, 9:50 IST
ಅಕ್ಷರ ಗಾತ್ರ

ಮುಂಬೈ: ವಿವಾದಗಳ ಮೂಲಕವೇ ಹೆಚ್ಚು ಸುದ್ದಿ ಮಾಡಿದ್ದ ನಟಿ–ರೂಪದರ್ಶಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ.

ಅವರ ಕುಟುಂಬದವರು ಹಾಗೂ ಸ್ನೇಹಿತರು ಪೂನಂ ಅವರದ್ದೇ ಇನ್‌ಸ್ಟಾಗ್ರಾಂನಲ್ಲಿ, 32 ವರ್ಷದ ನಟಿಯ ಸಾವಿನ ಕುರಿತು ಪೋಸ್ಟ್‌ ಹಾಕಿದ್ದಾರೆ. 

ಪೂನಂ ಕಾನ್ಪುರದಲ್ಲಿ ವಾಸವಿದ್ದರು. ಅಂತಿಮ ಸಂಸ್ಕಾರ ಕೂಡ ಅಲ್ಲಿಯೇ ನೆರವೇರಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ. 

2011ರಲ್ಲಿ ಹಿಂದಿ ‘ಬಿಗ್‌ ಬಾಸ್‌’ ರಿಯಾಲಿಟಿ ಶೋ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಪೂನಂ, 2013ರಲ್ಲಿ ‘ನಶಾ’ ಹಿಂದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ‘ಜಿಎಸ್‌ಟಿ– ಸಿರ್ಫ್ ತುಮ್ಹಾರಿ’ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. ಟಿ.ವಿ. ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ‘ಬೋಲ್ಡ್‌’ ಫೋಟೊಗಳನ್ನು ಪೋಸ್ಟ್‌ ಮಾಡಿ ಜನಪ್ರಿಯರಾಗಿದ್ದರು. 

2020ರಲ್ಲಿ ಚಿತ್ರ ತಯಾರಕ ಸ್ಯಾಮ್‌ ಬಾಂಬೆ ಅವರನ್ನು ವಿವಾಹವಾಗಿದ್ದ ಪೂನಂ, ಕೆಲವೇ ದಿನಗಳ ನಂತರ ಅವರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT