IND vs NZ: ನೀವು ಕೂಡ ನಾನು ಬಟ್ಟೆ ಬಿಚ್ಚುವುದನ್ನು ಬಯಸುತ್ತೀರಾ? ಪೂನಂ ಪಾಂಡೆ

ಬಾಲಿವುಡ್ ಬೋಲ್ಡ್ ಆ್ಯಂಡ್ ಹಾಟ್ ಬೆಡಗಿ ಪೂನಂ ಪಾಂಡೆ ಬಟ್ಟೆಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸದಾ ಸಕ್ರಿಯರಾಗಿರುವ ಪೂನಂ ಪಾಂಡೆ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದಾರೆ.
ಭಾರತ ವಿಶ್ವಕಪ್ ಗೆದ್ದರೆ ಬಟ್ಟೆ ಬಿಚ್ಚುವುದಾಗಿ ಹೇಳಿಕೆ ನೀಡಿದ ಪೂನಂ ಇದೀಗ ಅಂತಹದೇ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ನಡೆಯುತ್ತಿದೆ, ಈ ಪಂದ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪೂನಂ ಪಾಂಡೆ ಅವರನ್ನು ‘ಆಂಗ್ಲ ವೆಟ್‘ ಪೋರ್ಟಲ್ನ ವರದಿಗಾರ ಕೇಳಿದಾಗ, ನಾನು ಈಗ ಬಟ್ಟೆ ಬಿಚ್ಚಬೇಕೆ? ಎಂದು ಪೂನಂ ಪ್ರಶ್ನೆ ಮಾಡಿದ್ದಾರೆ.
ಫೈನಲ್ ಪಂದ್ಯಗಳು ನಡೆಯುವ ಸಂದರ್ಭಗಳಲ್ಲಿ ನನ್ನ ಎಲ್ಲಾ ಮಾಧ್ಯಮದವರು ಕೇಳುವ ಪ್ರಶ್ನೆ ಪಂದ್ಯದ ಬಗ್ಗೆ ಹೇಳಿ ಎಂದು? ನೀವು ಕೂಡ ನಾನು ಬಟ್ಟೆ ಬಿಚ್ಚುವುದನ್ನು ಬಯಸುತ್ತೀರಾ? ಎಂದು ಹೇಳಿದ್ದಾರೆ.
ಈ ಪಂದ್ಯದ ಬಗ್ಗೆ ಈಗ ಏನು ಹೇಳುವುದಿಲ್ಲ, ಮುಂದೆ ಹೇಳುವೆ ಎಂದು ಪೂನಂ ಹೇಳಿದ್ದಾರೆ.
ಪೂನಂ ಪಾಂಡೆಯವರ ಇತ್ತೀಚಿನ ಟ್ವೀಟ್
I am getting wet.#getwetwithPoonamPandey pic.twitter.com/iUydkdo6FZ
— Poonam Pandey Bombay (@iPoonampandey) June 12, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.