ಬುಧವಾರ, ಜನವರಿ 29, 2020
24 °C

ಸೂರಿ ಅಂಗಡಿಯಲ್ಲಿ ತಯಾರಾದ ಪಾಪ್‌ಕಾರ್ನ್‌ ಮಂಕಿ ಟೈಗರ್ ಸಿನಿಮಾ ಟೀಸರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ದೇಶಕ ಸೂರಿ ಅಂಗಡಿಯಲ್ಲಿ ತಯಾರಾಗಿರುವ ‘ಪಾಪ್‌ಕಾರ್ನ್‌ ಮಂಕಿ ಟೈಗರ್‘ ಸಿನಿಮಾದ ಟೀಸರ್‌ ಮಂಗಳವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಸೂರಿ ಸಿನಿಮಾದ ಟೈಟಲ್‌ಗಳು ಮೇಲ್ನೋಟಕ್ಕೆ ಅಸಂಬದ್ಧವಾಗಿ ಕಂಡರೂ ಕಥೆಯನ್ನು ಕಲಾತ್ಮಕವಾಗಿ ಹೆಣೆದು ಸುಸಂಬದ್ಧಗೊಳಿಸುವುದೇ ಸೂರಿ ಸ್ಟೈಲ್‌. ಟಗರು ಬಳಿಕ ಸೂರಿ ಮತ್ತೊಂದು ಹಿಟ್‌ ಸಿನಿಮಾ ನೀಡಲು ಬರುತ್ತಿದ್ದಾರೆ. 

ಮಾಫಿಯಾದ ಹಿನ್ನೆಲೆ ಮತ್ತು ಮನುಷ್ಯನ ಸಂಬಂಧ ಕುರಿತು ಚಿತ್ರ ಮಾತನಾಡುತ್ತದೆ. ಈ ಚಿತ್ರದ ಟೀಸರ್‌ ನೋಡಿದಾಗ ಇದೊಂದು ರೌಡಿಸಂ ಕಥೆ ಎಂದೇ ಕಂಡು ಬಂದರೂ ಮಾನವೀಯ ಸಂಬಂಧಗಳ ಕುರಿತ ಸೂರಿ ಭಿನ್ನವಾಗಿ ಏನೋ ಹೇಳಲು ಹೊರಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಮಹಾನಗರ, ಸಮುದ್ರ, ನಲ್ಲಿ ನೀರು, ನೆತ್ತರು, ಚಿಟ್ಟೆ, ಮಗುವಿನ ದೃಶ್ಯಗಳು ಟೀಸರ್‌ನಲ್ಲಿ ಬಂದು ಹೋಗುತ್ತವೆ. 

ಪಾಪ್‌ಕಾರ್ನ್‌ ಮಂಕಿ ಟೈಗರ್ ಸಿನಿಮಾದಲ್ಲಿ ಡಾಲಿ ಖ್ಯಾತಿಯ ಧನಂಜಯ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಡಾಲಿಗೆ ಜೋಡಿಯಾಗಿ ನಿವೇದಿತಾ ಬಣ್ಣ ಹಚ್ಚಿದ್ದಾರೆ. ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು