ಜಗ್ಗೇಶ್ ನಟನೆಯ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಚಿತ್ರಮಂದಿರದೊಳಗೆ ಅಡಿಯಿಡುವ ಸಿದ್ಧತೆಯಲ್ಲಿದೆ. ರಮೇಶ್ ಇಂದಿರಾ ಆ್ಯಕ್ಷನ್ ಕಟ್ ಹೇಳಿರುವ, ಶ್ರುತಿ ನಾಯ್ಡು ನಿರ್ಮಾಣ ಮಾಡಿರುವ ಸಿನಿಮಾ ಇದು. ಕಿರುತೆರೆಯಲ್ಲಿ ಯಶಸ್ಸಿನ ಪತಾಕೆ ನೆಟ್ಟಿರುವ ರಮೇಶ್ ಇಂದಿರಾ ಮತ್ತು ಶ್ರುತಿ ನಾಯ್ಡು ಅವರಿಗೆ ಸಿನಿಮಾ ನಿರ್ದೇಶನ–ನಿರ್ಮಾಣ ಹೊಸದು. ಆದರೆ ಒಳ್ಳೆಯ ತಂಡ ಮತ್ತಷ್ಟೇ ಒಳ್ಳೆಯ ಕಥೆಯ ಮೇಲೆ ಅವರಿಗೆ ನಂಬಿಕೆ ಇದೆ. ಹಾಗಾಗಿಯೇ ಜನರಿಂದ ಸಿಗುವ ಸ್ಪಂದನದ ಕುರಿತೂ ಅವರಿಗೆ ವಿಶ್ವಾಸವಿದೆ.

ಡಬ್ಬಲ್ ಮೀನಿಂಗ್ ಡೈಲಾಗ್, ಜೋಕ್ಗಳ ಜನಪ್ರಿಯ ‘ಇಮೇಜ್’ನಿಂದ ಆಚೆ ಬಂದು ಸಂಬಂಧಗಳ ಹುಡುಕಾಟದಲ್ಲಿ ತನ್ನನ್ನೇ ನಾನು ಕಂಡುಕೊಳ್ಳುವ ಸದ್ಗ್ರಹಸ್ಥನ ವೇಷದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರಂತೆ. ಅವರಿಗೆ ಮಧುಬಾಲ ಜೋಡಿಯಾಗಿರುವುದು ಚಿತ್ರದ ಇನ್ನೊಂದು ವಿಶೇಷ. ಸುಧಾರಾಣಿ, ಪ್ರಮೋದ್, ಜಹಾಂಗೀರ್, ಹಿತಾ ಚಂದ್ರಶೇಖರ್ ಹೀಗೆ ಪ್ರತಿಭಾವಂತ ನಟರ ದಂಡೇ ಚಿತ್ರದಲ್ಲಿದೆ. ಇತ್ತೀಚೆಗಷ್ಟೇ ‘ಪ್ರೀಮಿಯರ್ ಪದ್ಮಿನಿ’ ಟ್ರೇಲರ್ ಬಿಡುಗಡೆಗೊಂಡಿದೆ. 1.2 ಲಕ್ಷ ವ್ಯೂಸ್ ಪಡೆದುಕೊಂಡಿದೆ. ಟ್ರೇಲರ್ನಲ್ಲಿಯೂ ಇದು ಸಂಬಂಧಗಳ ಸಿಕ್ಕುಗಳ ಭಾವುಕ ಕಥನ ಎಂಬುದಕ್ಕೆ ಸಾಕಷ್ಟು ಪುರಾವೆ ಸಿಗುತ್ತದೆ.

ಕಥಾನಾಯಕ ‘ಪ್ರೀಮಿಯರ್ ಪದ್ಮಿನಿ’ ಕಾರನ್ನು ತನ್ನ ಬಳಿ ಇರಿಸಿಕೊಂಡಿರುತ್ತಾನಂತೆ. ಆ ಕಾರಿನ ಜತೆಗಿನ ಭಾವುಕ ಸಂಬಂಧದ ಕಾರಣದಿಂದ ಹೊಸ ಕಾರು ಕೊಳ್ಳದೆ ಇಟ್ಟುಕೊಳ್ಳುವ ಕಥಾನಾಯಕ, ಬದುಕಿನಲ್ಲಿ ಇಲ್ಲದಿರುವುದ ನೆನೆದು ಏನೆಲ್ಲ ಕಳೆದುಕೊಳ್ಳುತ್ತಾನೆ, ಮತ್ತೆ ಹೇಗೆ ಗಳಿಸಿಕೊಳ್ಳುತ್ತಾನೆ ಎನ್ನುವುದೇ ಕಥೆಯ ಹಂದರವಂತೆ.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಏಪ್ರಿಲ್ 26ರಂದು ತೆರೆಗೆ ತರುವ ಯೋಚನೆಯಲ್ಲಿ ಚಿತ್ರತಂಡ ಸಿದ್ಧತೆಗಳನ್ನು ನಡೆಸುತ್ತಿದೆ.

ಕೃಪೆ: ಸುಧಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.