‘ಫೈರ್‌ಬ್ರ್ಯಾಂಡ್‌’ ನೆಟ್‌ಫ್ಲಿಕ್ಸ್‌ನಲ್ಲಿ

7

‘ಫೈರ್‌ಬ್ರ್ಯಾಂಡ್‌’ ನೆಟ್‌ಫ್ಲಿಕ್ಸ್‌ನಲ್ಲಿ

Published:
Updated:

ಪ್ರಿಯಾಂಕಾ ಚೋಪ್ರಾ ಮತ್ತು ತಾಯಿ ಮಧು ಚೋಪ್ರಾ ನಿರ್ಮಾಣದ ಮರಾಠಿ ಚಿತ್ರ ‘ಫೈರ್‌ಬ್ರ್ಯಾಂಡ್‌’ ಇದೇ 22ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ತಮ್ಮ ‘ಪರ್ಪಲ್‌ ಪೆಬೆಲ್‌ ಪಿಕ್ಚರ್ಸ್‌’ ನಿರ್ಮಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಈ ಚಿತ್ರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಗೆದ್ದಿದೆ. ಆದರೆ ಎಲ್ಲಾ ವರ್ಗದ ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ನೆಟ್‌ಫ್ಲಿಕ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ. ‌

ಆಧುನಿಕ ಜೀವನದಲ್ಲಿ ಸಂಬಂಧಗಳ ಸಂಕೀರ್ಣತೆಗಳನ್ನು ಬಿಚ್ಚಿಡುವ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಉಷಾ ಜಾಧವ್‌, ಗಿರೀಶ್ ಕುಲಕರ್ಣಿ, ಸಚಿನ್‌ ಖೆಡೇಕರ್‌ ಮತ್ತು ರಾಜೇಶ್ವರಿ ಸಚ್‌ದೇವ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅರುಣ ರಾಜೇ ಪಾಟೀಲ್‌ ಈ ಚಿತ್ರದ ನಿರ್ದೇಶಕಿ.

ಇದು ತಾಯಿ–ಮಗಳು ಮರಾಠಿಯಲ್ಲಿ ನಿರ್ಮಿಸಿರುವ ಮೂರನೇ ಸಿನಿಮಾ. ಈ ಹಿಂದೆ ‘ವೆಂಟಿಲೇಟರ್‌’ ಮತ್ತು ‘ಕಾಯ್‌ ರೇ ರಾಸ್ಕಲಾ’ ಎಂಬ ಸಿನಿಮಾಗಳನ್ನು ನಿರ್ಮಿಸಿದ್ದರು. ‘ವೆಂಟಿಲೇಟರ್‌’ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೀಗ, ‘ಫೈರ್‌ಬ್ರ್ಯಾಂಡ್‌’ ಮೂಲಕ ಡಿಜಿಟಲ್‌ ಮಾಧ್ಯಮ ಪ್ರವೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !