ನಿಕ್‌ ಜತೆ ಪ್ರಿಯಾಂಕಾ ನಿಕ್ಕಿ?

7
ಬಾಲಿವುಡ್‌

ನಿಕ್‌ ಜತೆ ಪ್ರಿಯಾಂಕಾ ನಿಕ್ಕಿ?

Published:
Updated:
ಪ್ರಿಯಾಂಕಾ, ನಿಕ್‌

ಅಮೆರಿಕದ ಪಾಪ್ ಗಾಯಕ ನಿಕ್ ಜೋನಸ್ ಜತೆ ನಟಿ ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥವಾಗಿದೆ ಎನ್ನುವ ಗಾಳಿಸುದ್ದಿ ಬಾಲಿವುಡ್ ತುಂಬೆಲ್ಲಾ ಜೋರು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ನಿಕ್ ಮತ್ತು ಪ್ರಿಯಾಂಕಾ ಇಬ್ಬರೂ ಒಂದೇ ರೀತಿಯ ಉಂಗುರ ಧರಿಸಿರುವುದು.

ಇತ್ತೀಚೆಗೆ ಹಾಲಿವುಡ್‌ನಿಂದ ಪ್ರಿಯಾಂಕಾ ಜತೆ ಮುಂಬೈಗೆ ಬಂದಿದ್ದ ನಿಕ್ ಮಾಧ್ಯಮಗಳ ಗಮನ ಸೆಳೆದಿದ್ದರು. ಪಿಗ್ಗಿ ಜತೆಗೆ ಕೈ ಹಿಡಿದು ಮುಂಬೈನ ರೆಸ್ಟೊರೆಂಟ್‌ವೊಂದಕ್ಕೆ ತೆರಳಿದ್ದ ಅವರು ಅಂದು ಒಂದೇ ರೀತಿಯ ಉಂಗುರ ಧರಿಸಿದ್ದನ್ನು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿವೆ.

ಈ ನಡುವೆ ಪ್ರಿಯಾಂಕಾ ತನ್ನ ಇನ್‌ಸ್ಟಾಗ್ರಾಂನಲ್ಲಿ ನಿಕ್ ನನ್ನ ನೆಚ್ಚಿನ ವ್ಯಕ್ತಿ ಎಂದು ಬರೆದುಕೊಂಡಿರುವುದು ಕೂಡಾ ಈ ಸುದ್ದಿಗೆ ಮತ್ತಷ್ಟು ಪುಷ್ಟಿನೀಡುವಂತಿದೆ.

ನಿಕ್ ಮತ್ತು ಪ್ರಿಯಾಂಕಾ ನಡುವೆ ಹತ್ತು ವರ್ಷಗಳ ಅಂತರವಿದ್ದು, ಇದುವರೆಗೂ ಈ ಜೋಡಿ ತಮ್ಮ ಸಂಬಂಧದ ಕುರಿತು ಎಲ್ಲೂ ಹೇಳಿಕೊಂಡಿಲ್ಲ.

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 3

  Sad
 • 1

  Frustrated
 • 0

  Angry

Comments:

0 comments

Write the first review for this !