ಮಂಗಳವಾರ, ಸೆಪ್ಟೆಂಬರ್ 17, 2019
24 °C

ತಮಟೆ ಸದ್ದಿಗೆ ರಾಘಣ್ಣ, ಪುನೀತ್‌ ಭರ್ಜರಿ ಕುಣಿತ

Published:
Updated:

ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ ಎಲ್ಲೆ ಮೀರಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಈ ಸಡಗರದಲ್ಲಿ ಮಿಂದೆದಿದ್ದಾರೆ. ಹಬ್ಬದ ಸಂಭ್ರಮ ವರನಟ ಡಾ.ರಾಜಕುಮಾರ್ ಅವರ ದೊಡ್ಮನೆಯಲ್ಲೂ ಕಳೆಗಟ್ಟಿದೆ. ರಾಜ್‌ ಕುಟುಂಬ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ವಿಡಿಯೊವೊಂದು ವೈರಲ್‌ ಆಗಿದೆ.

ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ರಾಘವೇಂದ್ರ ರಾಜ್‌ಕುಮಾರ್‌, ಪುನೀತ್ ರಾಜ್‌ಕುಮಾರ್‌, ವಿನಯ್‌ ರಾಜ್‌ಕುಮಾರ್‌ ಸೇರಿದಂತೆ ಕುಟುಂಬದ ಸದಸ್ಯರು ತಮಟೆ ಸದ್ದಿಗೆ ಕುಣಿತ ಹಾಕಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅಭಿಮಾನಿ ಬಳಗವು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

Post Comments (+)