ಶನಿವಾರ, ಸೆಪ್ಟೆಂಬರ್ 25, 2021
26 °C

ಧನುಷ್ ಮುಂದಿನ ಚಿತ್ರಕ್ಕೆ ಜೊತೆಯಾಗಲಿದ್ದಾರೆ ರಾಶಿ ಖನ್ನಾ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿ ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಾಶಿ ಖನ್ನಾ, ತಮಿಳಿನಲ್ಲಿ ಧನುಷ್ ಜೊತೆ ಮುಂಬರುವ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ.

ಸನ್ ಪಿಕ್ಚರ್ಸ್ ಅಡಿ ನಿರ್ಮಾಣವಾಗುತ್ತಿರುವ ಸದ್ಯ ‘ಡಿ44‘ ಎಂದು ಹೆಸರಿಸಲಾಗಿರುವ ಚಿತ್ರದಲ್ಲಿ ಧನುಷ್‌ಗೆ ರಾಶಿ ಜೊತೆಯಾಗಲಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮೆನನ್ ಹಾಗೂ ಪ್ರಕಾಶ್ ರಾಜ್ ಕೂಡ ನಟಿಸುತ್ತಿದ್ದಾರೆ. ಮಿತ್ರನ್ ಜವಾಹರ್ ನಿರ್ದೇಶಿಸುತ್ತಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ರಾಶಿ ಖನ್ನಾ, ‘ಧನುಷ್ ಅವರ ಜೊತೆಯಾಗಿ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ, ತಮಿಳು ಸಿನಿಮಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ‘ ಎಂದು ಹೇಳಿದ್ದಾರೆ.

ಈಗಾಗಲೇ ಹಿಂದಿಯಲ್ಲಿ ವೆಬ್‌ ಸೀರಿಸ್ ಒಂದರಲ್ಲಿ ರಾಶಿ ಖನ್ನಾ ಶಾಹಿದ್ ಕಪೂರ್ ಅವರ ಜೊತೆ ತೊಡಗಿಸಿಕೊಂಡಿದ್ದು, ಅವರು ‘ಮದ್ರಾಸ್ ಕೆಫೆ‘, ‘ಬಂಗಾಳ್ ಟೈಗರ್‘ ಹಾಗೂ ‘ಸುಪ್ರೀಂ‘ನಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆತ್ತಲಾಗಿ ಬಂದ ಗಹನಾ ವಶಿಷ್ಠ್‌: ಅಶ್ಲೀಲವೆಂದರೆ ಇದೇನಾ? –ಪ್ರಶ್ನಿಸಿದ ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು