ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿ ಶೇಮಿಂಗ್ ಬಗ್ಗೆ ನಟಿ ರಾಧಿಕಾ ಆಪ್ಟೆ ಬೇಸರದ ಮಾತು

Last Updated 13 ಏಪ್ರಿಲ್ 2023, 10:44 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ಬೋಲ್ಡ್ ನಟನೆಯಿಂದ ಮಾತ್ರವಲ್ಲದೇ ಉತ್ತಮ ನಟನೆಯಿಂದಲೂ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ನಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಮಿಸೆಸ್ ಅಂಡರ್‌ಕವರ್’ ಸಿನಿಮಾ ಇಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರದ ಪ್ರಚಾರಾರ್ಥ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬುಧವಾರ ಮಾತನಾಡಿರುವ ರಾಧಿಕಾ ಆಪ್ಟೆ, ಆರಂಭದ ದಿನಗಳಲ್ಲಿ ತಾವು ಅನುಭವಿಸಿದ ಬಾಡಿ ಶೇಮಿಂಗ್ ಹಾಗೂ ಈ ದಿನದಲ್ಲಿ ಅಂಥದಕ್ಕೆ ತಮ್ಮ ಉತ್ತರ ಏನಾಗಿರುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

‘ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಾನು ವಿಪರೀತ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದೆ. ಆರಂಭದಲ್ಲಿ ಸಿನಿಮಾಗಳಿಗಾಗಿ ನನ್ನನ್ನು ಹುಡುಕಿಕೊಂಡು ಬಂದವರು ಕೆಲವರು ದಪ್ಪಗಿದ್ದೀಯಾ ಎನ್ನುತ್ತಿದ್ದರು. ನಂತರ ಕಷ್ಟ ಪಟ್ಟು ತೂಕ ಇಳಿಸಿಕೊಂಡರೇ ನೀನೇಕೆ ದೊಡ್ಡ ಮೂಗು ದೊಡ್ಡ ಸ್ತನಗಳನ್ನು ಹೊಂದಿಲ್ಲ’ ಎಂದು ಕೇಳುತ್ತಿದ್ದರು’ ಎಂದಿದ್ದಾರೆ

‘ಆಗ ನನಗೆ ವಿಪರೀತಿ ಸಿಟ್ಟು ಬರುತ್ತಿತ್ತು. ಆದರೆ, ಇಂದು ಆ ರೀತಿ ಕೇಳಿದರೆ ಅವರಿಗೇನು ಉತ್ತರ ಕೊಡಬೇಕು ಎಂದು ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ.

‘ಒಂದು ವೇಳೆ ಇಂದು ನೀವೆಕೆ ದೊಡ್ಡ ಸ್ತನಗಳನ್ನು ಹೊಂದಿಲ್ಲ ಎಂದರೆ, ಪ್ರೊಜೆಕ್ಟ್ ತೆಗೆದುಕೊಂಡು ಬಂದವರನ್ನೇ ಒದ್ದೊಡಿಸುತ್ತೇನೆ’ ಎಂದು ಹೇಳಿದ್ದಾರೆ. ಅವರವರ ಇಷ್ಟದಂತೆ ಅವರ ದೇಹವಿರುತ್ತದೆ. ಅದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಬಾಡಿ ಶೇಮಿಂಗ್ ಒಂದು ಕೆಟ್ಟ ಹವ್ಯಾಸ’ ಎಂದು ಹೇಳಿದ್ದಾರೆ.

ಅನುಶ್ರೀ ಮೆಹ್ತಾ ನಿರ್ದೇಶಿಸಿರುವ ಮಿಸೆಸ್ ಅಂಡರ್‌ಕವರ್ ಸಿನಿಮಾ ಒಂದು ಕಾಮಿಡಿ ಸ್ಪೈ ಡ್ರಾಮಾ ಮೂವಿಯಾಗಿದ್ದು ಇದರಲ್ಲಿ ರಾಧಿಕಾ ಆಪ್ಟೆ ದುರ್ಗಾ ಪಾತ್ರದಲ್ಲಿ ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT