ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಜಾಕಿ 'ರಚನಾ' ಹೃದಯಾಘಾತದಿಂದ ನಿಧನ

Last Updated 22 ಫೆಬ್ರುವರಿ 2022, 12:24 IST
ಅಕ್ಷರ ಗಾತ್ರ

ಬೆಂಗಳೂರು: ರೇಡಿಯೊ ಜಾಕಿ ಆಗಿದ್ದ ರಚನಾ (39) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ.

ತಮ್ಮ ಮಾತು, ಧ್ವನಿಯಿಂದ ಅಪಾರ ಕೇಳುಗರನ್ನು ಸಂಪಾದಿಸಿದ್ದ ಅವರು ನಟ ರಕ್ಷಿತ್‌ ಶೆಟ್ಟಿ ಜೊತೆ ‘ಸಿಂಪಲ್ಲಾಗಿ ಒಂದ್‌ ಲವ್‌ ಸ್ಟೋರಿ’ ಚಿತ್ರದಲ್ಲೂ ಅಭಿನಯಿಸಿದ್ದರು.

ಬೆಳಿಗ್ಗೆ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಅವರು ಅಸುನೀಗಿದರು.

ರೇಡಿಯೊ ಜಾಕಿ ಆಗಿ ರೇಡಿಯೊ ಮಿರ್ಚಿ ಮತ್ತು ರೇಡಿಯೊ ಸಿಟಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದ ಅವರು, ಜೆ.ಪಿ. ನಗರದ ಫ್ಲ್ಯಾಟ್‌ನಲ್ಲಿದ್ದರು.

ರಚನಾ ಅಂಗಾಂಗಗಳನ್ನು ಆಸ್ಪತ್ರೆಗೆ ದಾನ ಮಾಡಲು ಅವರ ಪೋಷಕರು ನಿರ್ಧರಿಸಿದ್ದಾರೆ. ಚಾಮರಾಜಪೇಟೆಯಲ್ಲಿರುವ ಅವರ ಪೋಷಕರ ನಿವಾಸದಲ್ಲಿ ಅಂತಿಮ ದರ್ಶನ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT