ಬುಧವಾರ, ಏಪ್ರಿಲ್ 8, 2020
19 °C

ರಜನಿ ಚಿತ್ರಕ್ಕೆ ಕಡಿಮೆ ಸಂಭಾವನೆ ಕೇಳಿದ ನಯನತಾರಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಯನತಾರಾ ‘ಲೇಡಿ ಸೂಪರ್‌ ಸ್ಟಾರ್’ ಎಂದೇ ಖ್ಯಾತಿ ಪಡೆದವರು. ಕನ್ನಡದಲ್ಲಿ ನಟ ಉಪೇಂದ್ರ ಹೀರೊ ಆಗಿದ್ದ ‘ಸೂಪರ್’ ಚಿತ್ರದಲ್ಲೂ ನಟಿಸಿದ್ದರು. ಈಗ ಅವರು ‘ಸೂಪರ್ ಸ್ಟಾರ್‌’ ರಜನಿಕಾಂತ್ ಅವರ ‘ಅಣ್ಣಾತೆ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಅಣ್ಣಯ್ಯ’ ಎನ್ನುವುದು ಇದರರ್ಥ. ಮಹಿಳಾ ಕೇಂದ್ರಿತ ಸಿನಿಮಾಗಳಲ್ಲೂ ಮನೋಜ್ಞ ಅಭಿನಯ ನೀಡಿದ ಹೆಗ್ಗಳಿಕೆ ಆಕೆಯದ್ದು.

ಆಕೆಯ ನಟನೆಯ ಸಾಮರ್ಥ್ಯದ ಬಗ್ಗೆ ಯಾರೊಬ್ಬರು ಬೊಟ್ಟು ತೋರಿಸುವಂತಿಲ್ಲ. ಹಾಗಾಗಿಯೇ, ಸಂಭಾವನೆ ವಿಚಾರದಲ್ಲಿಯೂ ಆಕೆ ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಿನಿಮಾದ ಪಾತ್ರಕ್ಕೆ ತಕ್ಕಂತೆ ಸಂಭಾವನೆ ಕೇಳುವ ನಯನತಾರಾ ಅತಿಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತ ಚಿತ್ರರಂಗದ ನಟೀಮಣಿಯರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.

‘ಅಣ್ಣಾತೆ’ ಚಿತ್ರಕ್ಕೆ ಕಡಿಮೆ ಸಂಭಾವನೆ ಕೇಳಿ ಈಗ ಅವರು ಸುದ್ದಿಯಾಗಿದ್ದಾರೆ. ಲೈಕಾ ಪ್ರೊಡಕ್ಷನ್‌ ನಿರ್ಮಿಸಿದ್ದ ರಜನಿ ನಾಯಕರಾಗಿದ್ದ ‘ದರ್ಬಾರ್‌’ ಚಿತ್ರಕ್ಕೆ ಆಕೆ ಪಡೆದ ಸಂಭಾವನೆ ಮೊತ್ತ ಬರೋಬ್ಬರಿ ₹ 5.5 ಕೋಟಿ. ‘ಅಣ್ಣಾತೆ’ ಚಿತ್ರದಲ್ಲಿ ಮತ್ತೆ ತಲೈವನ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವ ನಯನತಾರಾ, ಈ ಸಿನಿಮಾಕ್ಕೆ ₹ 10.5 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಲ್ಲಿ ಹರಿದಾಡಿತ್ತು.

ಆದರೆ, ಈ ಚಿತ್ರ ನಿರ್ಮಿಸುತ್ತಿರುವ ಸನ್‌ ಪಿಕ್ಚರ್ಸ್‌ ಈ ಸುದ್ದಿಯನ್ನು ಅಲ್ಲಗೆಳೆದಿದೆ. ‘ದರ್ಬಾರ್‌’ ಚಿತ್ರಕ್ಕೆ ನನಗೆ ಸಿಕ್ಕಿರುವ ಸಂಭಾವನೆಯ ಮೊತ್ತದಲ್ಲಿ ಶೇಕಡ 20ರಷ್ಟನ್ನು ಕಡಿತಗೊಳಿಸಿ ‘ಅಣ್ಣಾತೆ’ ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಸಂಭಾವನೆ ನೀಡುವಂತೆ ತಿಳಿಸಿದ್ದಾರೆ ಎಂದು ಹೇಳಿದೆ.

ಸಿರುಥೈ ಶಿವ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‌ ಅವರೂ ಇದರಲ್ಲಿ ನಟಿಸುತ್ತಿದ್ದಾರೆ. ಅವರದು ರಜನಿಕಾಂತ್‌ ಅವರ ಪುತ್ರಿಯ ಪಾತ್ರವಂತೆ. ಹಿರಿಯ ನಟಿಯರಾದ ಮೀನಾ ಹಾಗೂ ಖುಷ್ಬೂ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ಡಿ. ಇಮಾನ್‌ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು