ಬುಧವಾರ, ಅಕ್ಟೋಬರ್ 28, 2020
20 °C

ಕೆಜಿಎಫ್‌ ಅಖಾಡಕ್ಕೆ ನಾಳೆ ‘ರಾಖಿ ಭಾಯ್‌’ ಎಂಟ್ರಿ

. Updated:

ಅಕ್ಷರ ಗಾತ್ರ : | |

Prajavani

‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಮೇಲೆ ಗಮನ ನೆಟ್ಟಿರುವ ಸಿನಿ ರಸಿಕರಿಗೆ ಒಂದು ಸಿಹಿ ಸುದ್ದಿಯನ್ನು ಚಿತ್ರತಂಡ ನೀಡಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಾಳೆಯಿಂದ (ಗುರುವಾರ) ಆರಂಭವಾಗಲಿದ್ದು, ಚಿತ್ರದ ನಾಯಕ ‘ರಾಖಿ ಭಾಯ್‌’ ಯಶ್‌ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಈ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ತಿಕ್ ಗೌಡ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಈ ತಿಂಗಳಾಂತ್ಯಕ್ಕೆ ನಾವು ಚಿತ್ರೀಕರಣ ಪೂರ್ಣಗೊಳಿಸಿ ಸಿನಿಮಾ ಬಿಡುಗಡೆಯತ್ತ ಸಾಗಲಿದ್ದೇವೆ’ ಎಂದಿದ್ದಾರೆ. 

ಕೊರೊನಾ ಕಾರಣದಿಂದ ನಿಂತಿದ್ದ ಸಿನಿಮಾ ಚಿತ್ರೀಕರಣ, ಲಾಕ್‌ಡೌನ್‌ ತೆರವಾದ ನಂತರ ಅಂದರೆ, ಆಗಸ್ಟ್ 26ರಿಂದ ನಡೆಯುತ್ತಿದೆ. ಕೊರೊನಾ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ನಟ ಪ್ರಕಾಶ್ ರೈ ಮತ್ತು ನಟಿ ಮಾಳವಿಕಾ ಅವಿನಾಶ್‌ ಅವರು ನಟಿಸಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಲಾಕ್‍ಡೌನ್‍ಗೂ ಮೊದಲು ನಡೆದ ಚಿತ್ರೀಕರಣದ ವೇಳೆ ಬಾಲಿವುಡ್‍ ನಟ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ಪಾಲ್ಗೊಂಡಿದ್ದರು.

ದಸರಾ ವೇಳೆಗೆ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ, ಕೊರೊನಾ ಸೋಂಕು ಲೆಕ್ಕಾಚಾರ ತಲಕೆಳಗು ಮಾಡಿದ್ದು, ಚಿತ್ರೀಕರಣ ವಿಳಂಬವಾಗಿದೆ. ಚಿತ್ರದ ಟ್ರೈಲರ್‌ ನೋಡಲು ಈ ತಿಂಗಳಾಂತ್ಯದವರೆಗೂ ಸಿನಿರಸಿಕರು ಕಾಯಬೇಕಾಗಿದೆ. ಇನ್ನು ಈ ಚಿತ್ರವನ್ನು 2021ರಲ್ಲಿ ಬಿಡುಗಡೆ ಮಾಡುವ ಲೆಕ್ಕಾಚಾರ ಚಿತ್ರತಂಡದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು