‘ನಾನಾ’ ಪರ ರಾಖಿ ಬ್ಯಾಟಿಂಗ್

7

‘ನಾನಾ’ ಪರ ರಾಖಿ ಬ್ಯಾಟಿಂಗ್

Published:
Updated:
Deccan Herald

‘ನಾನಾ ಪಾಟೇಕರ್ ನನಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಕುರಿತು ಇಷ್ಟು ದಿನ ತೆಪ್ಪಗಿದ್ದ ನಟಿ ರಾಖಿ ಸಾವಂತ್ ಈಗ ಬಾಯಿಬಿಟ್ಟಿದ್ದಾರೆ. ಅರ್ಥಾತ್ ನಾನಾ ಪಾಟೇಕರ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಈಚೆಗೆ ಮುಂಬೈನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ರಾಖಿ, ‘ನಾನಾ ಪಾಟೇಕರ್ ಅವರ ಹೆಸರನ್ನು ಹಾಳುಮಾಡುವ ದುರುದ್ದೇಶದಿಂದ ತನುಶ್ರೀ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾದದ್ದು. ನಾನಾ ಪಾಟೇಕರ್ ಎಂಥವರು ಎಂಬುದು ನನಗೆ ಚೆನ್ನಾಗಿ ಗೊತ್ತು. ಒಳ್ಳೆ ವ್ಯಕ್ತಿತ್ವವುಳ್ಳ ವ್ಯಕ್ತಿ ಅವರು. ಬೇಕಾದರೆ, ಅವರ ಬಗ್ಗೆ ನನ್ನ ಬಳಿ ಬಂದು ತನುಶ್ರೀ ತಿಳಿದುಕೊಳ್ಳಲಿ’ ಎಂದು ಕಿಡಿಕಾರಿದ್ದಾರೆ.

‘ನಾನಾ ಪಾಟೇಕರ್ ಅವರಂತಹ ಹಿರಿಯ ಪ್ರಸಿದ್ಧ ನಟರ ವಿರುದ್ಧ ಈ ರೀತಿಯ ಆರೋಪ ಸಲ್ಲದು. ಪ್ರಚಾರಕ್ಕಾಗಿ ತನುಶ್ರೀ  ಆರೋಪ ಮಾಡಿದ್ದಾರೆ. ಇಂತಹ ಪ್ರವೃತ್ತಿಯನ್ನು ತಡೆಯಬೇಕಿದೆ’ ಎಂದಿದ್ದಾರೆ.

‘ಹಾರ್ನ್ ಒಕೆ ಪ್ಲೀಸ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದ ತನುಶ್ರೀ, ಅದರ ಚಿತ್ರೀಕರಣದಲ್ಲೂ ತೊಡಗಿದ್ದರು. ಕಾರಣ ನೀಡಿದೇ ಚಿತ್ರದಲ್ಲಿ ನಟಿಸಲು ಏಕಾಏಕಿ ಒಲ್ಲೆ ಎಂದ ಅವರು ಚಿತ್ರದಿಂದ ಹೊರನಡೆದಿದ್ದರು. ಅದಕ್ಕೆ ಅವರು ಕಾರಣವನ್ನು ತಿಳಿಸಿರಲಿಲ್ಲ. ಆ ಬಳಿಕ ತನುಶ್ರೀ ಮಾಡಬೇಕಿದ್ದ ಪಾತ್ರವನ್ನು ರಾಖಿ ನಿರ್ವಹಿಸಿದ್ದರು.

‘ಹಾರ್ನ್ ಒಕೆ ಪ್ಲೀಸ್’ ಚಿತ್ರದ ವಿವಾದ ಕುರಿತೂ ಮಾತನಾಡಿರುವ ಅವರು, ‘ಗಣೇಶ್ ಆಚಾರ್ಯ ನನಗೆ ಫೋನ್ ಮಾಡಿದ್ದರು. ಆಗ ನಾನು ಮನೆಯಲ್ಲಿದ್ದೆ. ಕೂಡಲೇ ಸೆಟ್‌ಗೆ ಬರುವಂತೆ ಅವರು ನನಗೆ ಮನವಿ ಮಾಡಿದರು. ನಾನಾ ಪಾಟೇಕರ್ ಅವರೂ ಫೋನ್ ಮಾಡಿದ್ದರು. ಅವರಿಬ್ಬರ ಮಾತಿಗೆ ಗೌರವ ನೀಡುವ ಸಲುವಾಗಿ ನಾನೂ ಸೆಟ್‌ಗೆ ಹೋದೆ’ ಎಂದು ಹೇಳಿದ್ದಾರೆ.

‘ಸೆಟ್‌ನಲ್ಲಿದ್ದ ವ್ಯಾನಿಟಿ ವ್ಯಾನ್ ಬಳಿ ಸಾಕಷ್ಟು ಮಂದಿ ನೆರೆದಿದ್ದರು. ಮಾಧ್ಯಮದವರೂ ಇದ್ದರು. ಏನಾಯ್ತು ಅಂತ ವಿಚಾರಿಸಿದ್ದಕ್ಕೆ, ‘ತನುಶ್ರೀ ಹಾಡೊಂದಕ್ಕೆ ಹೆಜ್ಜೆ ಹಾಕಬೇಕಿತ್ತು. ಶೂಟಿಂಗ್‌ಗೆ ಬಂದಿದ್ದ ಅವರು 4–5 ಗಂಟೆಗಳಾದರೂ ವ್ಯಾನಿಟಿ ವ್ಯಾನ್ ಒಳಗೆ ಸೇರಿಕೊಂಡಿದ್ದಾರೆ. ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಹ ನೀಡುತ್ತಿಲ್ಲ’ ಎಂದು ಗಣೇಶ್ ತಿಳಿಸಿದ್ದರು.’

‘ತನುಶ್ರೀ ಮೇಕಪ್ ಹಾಗೂ ಹೇರ್ ಸಿಬ್ಬಂದಿಯನ್ನು ವಿಚಾರಿಸಿದಾಗ, ‘ಕೆಲ ಗಂಟೆಗಳಿಂದ ತನುಶ್ರೀ ಅವರಿಗೆ ಜ್ಞಾನವೇ ಇಲ್ಲ. ಆಕೆ ಡ್ರಗ್ಸ್ ತೆಗೆದುಕೊಂಡು ಮೂರ್ಛೆ ಹೋಗಿದ್ದಾರೆ’ ಎಂದರು. ಆ ಬಗ್ಗೆ ಗಮನ ಕೊಡದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ಗಣೇಶ್ ಹಾಗೂ ನಾನಾ ಪಾಟೇಕರ್ ಹೇಳಿದ್ದರು. ಹೀಗಾಗಿ, ಚಿತ್ರೀಕರಣದಲ್ಲಿ ಪಾಲ್ಗೊಂಡೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !