ನವದೆಹಲಿ: ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ 16ನೇ ಚಲನಚಿತ್ರದ ಶೀರ್ಷಿಕೆಯನ್ನು ಚಿತ್ರ ನಿರ್ಮಾಪಕರು ಗುರುವಾರ ಘೋಷಿಸಿದ್ದಾರೆ.

ಬುಚಿ ಬಾಬು ಸನಾ ನಿರ್ದೇಶಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಬಹಿರಂಗಪಡಿಸಿದೆ.

ಎ ಮ್ಯಾನ್ ಆಫ್ ದಿ ಲ್ಯಾಂಡ್, ಎ ಫೋರ್ಸ್ ಆಫ್ ದಿ ನೇಚರ್. #RC16 #ಪೆದ್ದಿ. ಹ್ಯಾಪಿ ಬರ್ತ್ಡೇ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಎಂದು ಇನ್ಸ್ಟಾಗ್ರಾಮ್ನಲ್ಲಿನಿರ್ಮಾಣ ಸಂಸ್ಥೆ ಬರೆದುಕೊಂಡಿದೆ.

ಮಗಧೀರ, ಎವಡು, ರಂಗಸ್ಥಳಂ ಮತ್ತು ಆರ್ಆರ್ಆರ್ನಂತಹ ಹಿಟ್ ಚಿತ್ರಗಳನ್ನು ನೀಡಿರುವ ಚರಣ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ತಾರೆ ಜಾಹ್ನವಿ ಕಪೂರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ‘ದೇವರಾ’ನಂತರ ಈ ಚಿತ್ರ ಅವರ ಎರಡನೇ ತೆಲುಗು ಚಿತ್ರವಾಗಲಿದೆ.

ಕನ್ನಡದ ಹ್ಯಾಟ್ರಿಕ್ ಹೀರೊ ಶಿವ ರಾಜ್ಕುಮಾರ್, ಜಗಪತಿ ಬಾಬು ಮತ್ತು ‘ಮಿರ್ಜಾಪುರ್’ನಟ ದಿವ್ಯೇಂದು ಶರ್ಮಾ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.

‘ಪೆದ್ದಿ’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಈ ಚಿತ್ರವನ್ನು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ, ಆರ್. ರತ್ನವೇಲು ಛಾಯಾಗ್ರಹಣ, ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಮತ್ತು ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.