ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾನಾಗೆ ರಾಜಕೀಯ ಅಲರ್ಜಿ!

Last Updated 13 ಮಾರ್ಚ್ 2019, 19:55 IST
ಅಕ್ಷರ ಗಾತ್ರ

‘ರಾಜಕೀಯಕ್ಕೆ ಹೋಗೋದಾ? ಬಿಲ್‌ಕುಲ್‌ ನನ್ನಿಂದಾಗದು. ರಾಜಕೀಯವೆಂದ್ರೆ ನನಗೆ ಅಲರ್ಜಿ...’

ಹೀಗೆ ಕಡ್ಡಿ ಮುರಿದಂತೆ ಹೇಳಿರುವುದು ತೆಲುಗಿನ ಪ್ರಭಾವಿ ನಟಿ ರಾನಾ ದಗ್ಗುಬಾಟಿ.ಎನ್‌ಟಿಆರ್‌ ಚಿತ್ರಕ್ಕಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡುಪಾತ್ರವನ್ನು ಲೀಲಾಜಾಲವಾಗಿ ಮಾಡಿದವರು ರಾನಾ. ನಾಯ್ಡು ಪಾತ್ರ ಅವರ ಮೇಲೆ ಪ್ರಭಾವ ಬೀರಿದ್ದರೂ ರಾಜಕೀಯ ಕ್ಷೇತ್ರವೆಂದರೆ ಅವರಿಗೆ ಅಸಹ್ಯವಂತೆ.

ಒಪ್ಪಿಕೊಂಡ ಪಾತ್ರವನ್ನು ಪ್ರೇಕ್ಷಕನ ಕಣ್ಣಿಗೆ ಕಟ್ಟುವಂತೆ, ಮನಸ್ಸಿನಲ್ಲಿ ನಿಲ್ಲುವಂತೆ ಮಾಡುವುದು ರಾನಾ ಸ್ಟೈಲ್‌. ಚಂದ್ರಬಾಬು ನಾಯ್ಡು ಪಾತ್ರಕ್ಕೆ ಕಾಲ್‌ಶೀಟ್‌ ಕೊಟ್ಟ ತಕ್ಷಣ ಅವರು ಮಾಡಿದ ಮೊದಲ ಕೆಲಸ ನಾಯ್ಡು ಅವರನ್ನು ಭೇಟಿ ಮಾಡಿದ್ದು. ‘ನಿಜಜೀವನದ ಒಬ್ಬ ನಾಯಕನ ಪಾತ್ರವನ್ನು ಮೊದಲ ಬಾರಿಗೆ ಮಾಡುವಾಗ ಅವರ ಹಾವಭಾವ, ವರ್ತನೆಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ ತಪ್ಪೇನಿದೆ’ ಎಂದು ಆ ಸಂದರ್ಭದಲ್ಲಿ ರಾನಾ ಸುದ್ದಿಗಾರರನ್ನು ಪ್ರಶ್ನಿಸಿದ್ದರು. ಇದು ರಾನಾ ವೃತ್ತಿಪರತೆಗೆ ಸಾಕ್ಷಿ.

ಅದಿರಲಿ, ರಾಜಕಾರಣಿಯ ಪಾತ್ರ ಮಾಡಿದರೂ, ಎನ್‌ಟಿಆರ್‌ ಅವರಂತಹ ಮೇರು ಪ್ರತಿಭೆಯ ಸಿನಿಮಾದಲ್ಲಿ ನಟಿಸಿದರೂ ರಾನಾಗೆ ರಾಜಕೀಯದ ಗಂಧ ಅಂಟಿಕೊಳ್ಳಲಿಲ್ಲ.

ಅಸಲಿಗೆ, ರಾಜಕೀಯ ಕ್ಷೇತ್ರದ ಬಗ್ಗೆ ರಾನಾ ನೀಡುವ ವಿಶ್ಲೇಷಣೆ ಅದ್ಭುತವಾಗಿದೆ. ‘ರಾಜಕೀಯ ಕ್ಷೇತ್ರದ ನಾಟಕಗಳು ನೋಡಿ ಆನಂದಿಸಲು ಮಾತ್ರ ಚಂದ. ಆ ನಾಟಕಗಳನ್ನು ಸಿನಿಮಾ ಮಾಡಬಹುದು ಅಥವಾ ಸಿನಿಮಾದಲ್ಲಿ ಅಳವಡಿಸಿಕೊಳ್ಳಬಹುದು.ಆದರೆ ವೈಯಕ್ತಿಕವಾಗಿ ನನಗೆ ರಾಜಕೀಯವೆಂದರೆ ಸ್ವಲ್ಪವೂ ಇಷ್ಟವಿಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT